ಜನಜಾಗೃತಿ ಪ್ರಾದೇಶಿಕ ವಿಭಾಗದ 2020 – 21 ನೇ ಸಾಲಿನ ಸಾಧನಾ ವರದಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪರಮ ಪೂಜ್ಯ ಖಾವಂದ ದಂಪತಿಗಳು ಬಿಡುಗಡೆಗೊಳಿಸಿದರು. ನಂತರ ವಾರ್ಷಿಕ ವರದಿಯನ್ನು ವೀಕ್ಷಿಸಿದ ಪೂಜ್ಯರು ಜನಜಾಗೃತಿ ಪ್ರಾದೇಶಿಕ ಕಚೇರಿ ಯಿಂದ ನಡೆಸಲ್ಪಡುವ ವಿವಿಧ ಕಾರ್ಯಕ್ರಮಗಳಾದ ನವಜೀವನ ಸಮಿತಿಗಳು ಮತ್ತು ಅವುಗಳ ಬಲವರ್ಧನೆ, ಮದ್ಯವರ್ಜನ ಶಿಬಿರಗಳ ಆಯೋಜನೆ, ವಿಪತ್ತುನಿರ್ವಹಣಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರು ನಿರ್ವಹಿಸುತ್ತಿರುವ ಚಟುವಟಿಕೆಗಳು, ಸಾಮಾಜಿಕ ಅರಣ್ಯ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಸಲಹೆಗಳನ್ನು ನೀಡಿದರು. ಮಾತೃಶ್ರೀ ಅಮ್ಮನವರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ.ವಿ.ರಾಮಸ್ವಾಮಿ, ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎಲ್.ಎಚ್.ಮಂಜುನಾಥ್, ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್, ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾಯ್ಸ್, ಯೋಜನಾಧಿಕಾರಿಗಳಾದ ಮೋಹನ್.ಕೆ, ಜೈವಂತ್ ಪಟಗಾರ್, ಕಚೇರಿ ಸಹಾಯಕ ಪ್ರಬಂಧಕಿ ಭಾಗೀರಥಿ, ನವೀನ್ ಉಪಸ್ಥಿತರಿದ್ದರು.
