ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕು ವತಿಯಿಂದ ಜನಜಾಗೃತಿ ಜಾಥಾ ಹಾಗೂ ಸಮಾವೇಶ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.), ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ, ಉಡುಪಿ, ಕಾಪು & ಬ್ರಹ್ಮಾವರ ತಾಲೂಕು ವತಿಯಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು & ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಗಾಂಧಿ ಸ್ಮೃತಿ ಕಾರ್ಯಕ್ರಮ & ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.ಪ್ರಾದೇಶಿಕ ನಿರ್ದೇಶಕರು ಹಸಿರು ನಿಶಾನೆ ತೋರಿಸುವುದರ ಮೂಲಕ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ವಿವಿಧ ಸ್ತಬ್ದ ಚಿತ್ರಗಳು, ಭಜನಾ ಮಂಡಳಿಗಳ ಉಪಸ್ಥಿತಿಯಲ್ಲಿ ಭಜನಾ ಕಾರ್ಯಕ್ರಮ & ಚೆಂಡೆ ವಾದನದೊಂದಿಗೆ ಜನ ಜಾಗೃತಿ ವೇದಿಕೆ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು & ಸಂಘದ 2000ಕ್ಕೂ ಮಿಕ್ಕಿದ ಸದಸ್ಯರು ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆ ಜೂನಿಯರ್ ಕಾಲೇಜಿನಿಂದ ಮಠದವರೆಗೆ ಅತ್ಯುತ್ತಮವಾಗಿ ಸಾಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ಪರ್ಯಾಯ ಮಠದ ದಿವಾನರಾದ ಶ್ರೀ ವಾದಿರಾಜ್ ಭಟ್ಟರು ದೀಪ ಬೆಳಗಿಸುವ ಮೂಲಕ ಮಾಡಿದರು. ಗೌರವಾನ್ವಿತ ಉಡುಪಿ ಜಿಲ್ಲಾಧಿಕಾರಿಯವರಾದ ಡಾ. ಕೆ. ವಿದ್ಯಾ ಕುಮಾರಿಯವರು ದುಶ್ಚಟದ ಬಗ್ಗೆ ಮಾಹಿತಿಯನ್ನು ನೀಡಿ CSC ಕಾರ್ಯಕ್ರಮದ ಮುಖ್ಯ ಅಂಗವಾದ PMGDISHA & E-Shrum ಕಾರ್ಡ್ ಮಾಡಿಸಿದ ಸದಸ್ಯರಿಗೆ ಸಾಂಕೇತಿಕವಾಗಿ ವಿತರಣೆ ಮಾಡಿ ಶ್ರೀ ಕ್ಷೇತ್ರದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಆಶಯ ಭಾಷಣ ಮಾಡಿದ ಡಾ. ಪಿ.ವಿ.ಭಂಡಾರಿ ಜನಜಾಗೃತಿ ಕಾರ್ಯಕ್ರಮ ಅಂದರೇನು? ಅದರ ದ್ಯೇಯೋದ್ದೇಶಗಳೇನು? ಎಂಬುದನ್ನು ಮದ್ಯ ವರ್ಜನ ಶಿಬಿರಕ್ಕೆ ಸೇರಿ ನವಜೀವನ ನಡೆಸುತ್ತಿರುವ ಸದಸ್ಯರ ನೈಜ ಉದಾಹರಣೆಗಳೊಂದಿಗೆ ಮಾಹಿತಿ ನೀಡಿದರು. ಪೂಜ್ಯರಿಗೆ ಜನಜಾಗೃತಿ ಕಾರ್ಯಕ್ರಮ ಅತೀ ಪ್ರೀತಿ ಯಾಕೆ ಎಂಬುದನ್ನು ನೈಜವಾಗಿ ವಿವರಿಸಿದರು. ನವಜೀವನ ಸಮಿತಿಯ ಇಬ್ಬರು ಸದಸ್ಯರು ತಮ್ಮ ಅನಿಸಿಕೆ & ಓರ್ವ ಕುಟುಂಬದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು. 3 ಯೋಜನಾ ವ್ಯಾಪ್ತಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ವಿಪತ್ತು ನಿರ್ವಹಣಾ ಘಟಕದ ಒಂದೊಂದು ಸದಸ್ಯರನ್ನು ಗೌರವಿಸಲಾಯಿತು. ಉಡುಪಿ ಶಾಸಕರಾದ ಯಶಪಾಲ ಸುವರ್ಣ & ಕಾಪು ಶಾಸಕರಾದ ಸುರೇಶ ಶೆಟ್ಟಿ ಗುರ್ಮೆ ಪೂಜ್ಯರ ಜನಜಾಗೃತಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ದೇವದಾಸ್ ಹೆಬ್ಬಾರ್, ಜಿಲ್ಲಾ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ತಾಲೂಕು ಅಧ್ಯಕ್ಷರಾದ ಸತ್ಯಾನಂದ ನಾಯಕ್, LIC Micro insurance ವಿಭಾಗದ ಪ್ರಬಂಧಕರಾದ ದಿನೇಶ್ ಪ್ರಭು, ನಗರ ಸಭೆ ಸದಸ್ಯರಾದ ಮಾನಸ ಸಿ ಪೈ & ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶಮಿತ ಶೆಟ್ಟಿ, ಪ್ರಾದೇಶಿಕ ಕಚೇರಿ ಯೋಜನಾಧಿಕಾರಿಗಳು, ಜಿಲ್ಲಾ & 3 ಯೋಜನಾ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ನವಜೀವನ ಸಮಿತಿ ಸದಸ್ಯರಿಂದ ಜ್ಞಾನ ವಿಕಾಸ ಸದಸ್ಯರಿಂದ & ಸಂಘದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು