ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.) ಚಿಕ್ಕಮಗಳೂರು ಜಿಲ್ಲೆ ಇದರ 2024-25 ಸಾಲಿನ ಪ್ರಥಮ ಸಭೆಯನ್ನು ಎ.ಸಿ. ಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ದೀಪಾ ಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು. ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ., ಸ್ಥಾಪಕ ಅಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ, ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಬಾಲಕೃಷ್ಣ H.S., ನಿಕಟಪೂರ್ವ ಅಧ್ಯಕ್ಷರಾದ ಅರವಿಂದ ಸೋಮಯಾಚಿ,ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ನಾಗರಾಜ್, ಹಾಗೂ 9 ತಾಲೂಕಿನ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ತಾಲೂಕಿನ ಯೋಜನಾಧಿಕಾರಿಯವರು ಉಪಸ್ಥಿತಿಯಲ್ಲಿದ್ದರು. ವರದಿ ವರ್ಷದ ಕ್ರಿಯಾಯೋಜನೆಗಳ ಬಗ್ಗೆ ವಿಮರ್ಶೆ ನಡೆಸಲಾಯಿತು ಹಾಗೂ 2023-24 ಸಾಲಿನ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಅನುಷ್ಠಾನದ ವರದಿಯನ್ನು ಯೋಜನಾಧಿಕಾರಿಗಳು ಮಂಡಿಸಿದರು. ಗತ ಸಭೆಯ ವರದಿಯೊಂದಿಗೆ ಮಾನ್ಯ ಜಿಲ್ಲಾ ನಿರ್ದೇಶಕರು ಸಹಕಾರ ಯಾಚಿಸಿದರು. 2024-25 ರ ಸಾಲಿನ ಕ್ರಿಯಾಯೋಜನೆಯಲ್ಲಿ ಮದ್ಯವರ್ಜನ ಶಿಬಿರ, ಸ್ವಾಸ್ತ್ಯ ಸಂಕಲ್ಪ, ಮೇ 31 ತಂಬಾಕು ವಿರೋಧಿ ಕಾರ್ಯಕ್ರಮ, ಜೂನ್ 26 ಮಾದಕ ವಸ್ತು ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ, ಗಾಂಧಿ ಜಯಂತಿ, ನವಜೀವನ ಸಮಾವೇಶ, ಹೊಸ ನವಜೀವನ ಸಮಿತಿ ರಚನೆ ಮತ್ತು ಅನುಪಾಲನೆ, ಜಿಲ್ಲಾ ವೇದಿಕೆ ಸಭೆ, ಖಾತೆ ಬದಲಾವಣೆ, ಆರೋಗ್ಯ ರಕ್ಷಾ, ಅರ್ಹತಾ ಪತ್ರ, ಜನಜಾಗೃತಿ ವೇದಿಕೆಯ ಮಾರ್ಗಸೂಚಿಯ ಬಗ್ಗೆ ಜನಜಾಗೃತಿ ಯೋಜನಾಧಿಕಾರಿಗಳು ತಿಳಿಸಿದರು. ಮಾನ್ಯ ಪ್ರಾದೇಶಿಕ ನಿರ್ದೇಶಕರು ಹೊಸ ಸದಸ್ಯರಿಗೆ ಯೋಜನೆಯ ಕಾರ್ಯಕ್ರಮ, ಜನಜಾಗೃತಿ ವೇದಿಕೆಯ ಧ್ಯೇಯೋದ್ದೇಶದ ಬಗ್ಗೆ ಮಾರ್ಗದರ್ಶನ ನೀಡಿದರು. ಕೊಪ್ಪ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅದ್ಯಕ್ಷರು ಮತ್ತು ಜನಜಾಗೃತಿ ಪದಾಧಿಕಾರಿಗಳನ್ನು ಶಿಬಿರಕ್ಕೆ ಆಮಂತ್ರಿಸಿದರು.ಅದ್ಯಕ್ಷರು ಮಾತನಾಡಿ ಈ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನು ತಮ್ಮ ಯೋಜನ ವ್ಯಾಪ್ತಿಯಲ್ಲಿ ಮಾಡುವ ಬಗ್ಗೆ ತಿಳಿಸಿದರು. ಜಿಲ್ಲಾ ವೇದಿಕೆಯ 9 ಯೋಜನಾ ವ್ಯಾಪ್ತಿಯ ಪದಾಧಿಕಾರಿಗಳು, ಯೋಜನಾಧಿಕಾರಿಗಳು, ಜಿಲ್ಲಾ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
