ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ಸಂಕೇಶ್ವರ ತಾಲೂಕಿನ ನಿಡಸೋಸಿಯ ದುರುದುಂಡೇಶ್ವರ ಸಭಾಭವನದಲ್ಲಿ ನಡೆದ ನವಜೀವನ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ಚಿಕ್ಕೋಡಿ ಜಿಲ್ಲೆಯ ಗೌರನ್ವಿತಾ ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯನ್ ರವರು ದೀಪ ಬೆಳಗಿಸುವ ಮುಖೇನ ಉದ್ಘಾಟಿಸಿದರು. ನೀಡಸೋಸಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಅರುಣಾ ಸೂರ್ಯವಂಶಿ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಏನ್, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ವಿನಾಯಕ ಕಾಕಂಬಿ, ವಲಯದ ಮೇಲ್ವಿಚಾರಕರುಗಳಾದ ರಮೇಶ, ಪಾರ್ವತಿ, ಜನಜಾಗೃತಿ ಮೇಲ್ವಿಚಾರಕ ಉಮೇಶ, ನೀಡಸೋಸಿ ವಲಯದ ಸೇವಾಪ್ರತಿನಿಧಿಗಳು, ಶೌರ್ಯ ವಿಪತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.
