ಚಿಕ್ಕೋಡಿ /ಅಥಣಿ ಜಿಲ್ಲಾ ಜನಜಾಗೃತಿ ವೇದಿಕೆಯ ತ್ರೈಮಾಸಿಕ ಮಹಾಸಭೆ.
ಈ ದಿನ ಚಿಕ್ಕೋಡಿ ನಗರದ ವಾಲ್ಮೀಕಿ ಸಭಾಭವನದಲ್ಲಿ ಚಿಕ್ಕೋಡಿ /ಅಥಣಿ ಜಿಲ್ಲಾ ಜನಜಾಗೃತಿ ವೇದಿಕೆಯ ತ್ರೈಮಾಸಿಕ ಮಹಾಸಭೆ ನಡೆಯಿತು…ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ನಾಗರತ್ನ ಹೆಗಡೆ ಎಲ್ಲಾ ಗೌರವಾನ್ವಿತ ಪದಾಧಿಕಾರಿಗಳನ್ನು ಸ್ವಾಗತಿಸಿದರು,ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ್ ಏನ್ ಪ್ರಾಸ್ತಾವಿಕ ನುಡಿಗಳಾಡಿದರು.ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಸಭೆ ಪ್ರಾರಂಭವಾಗಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ವಿಠ್ಠಲ್ ಸಾಲಿಯಾನ್ ರವರು, ಗತ ಸಭೆಯ ವರದಿಯನ್ನು ಮಂಡಿಸಿ,ಚಿಕ್ಕೋಡಿ ಜಿಲ್ಲೆಯ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಅನುಷ್ಠಾನ ವರದಿಯನ್ನು ಮಂಡಿಸಿದರು.ಚಿಕ್ಕೋಡಿ /ಅಥಣಿ ಜಿಲ್ಲಾ ಜನಜಾಗೃತಿ ವೇದಿಕೆಯ ಎಲ್ಲ ತಾಲೂಕು ಕಾರ್ಯದರ್ಶಿಗಳು ಜಿಲ್ಲಾ ಜನಜಾಗೃತಿ ವೇದಿಕೆಯ ಅನುಷ್ಠಾನ ಸಾಧನಾ ವರದಿ ಮಂಡಿಸಿದರು.ಸಭೆಯಲ್ಲಿ 2025-26 ನೇ ಸಾರಿನಲ್ಲಿ ನಡೆದ ಮಧ್ಯವರ್ಜನ ಶಿಬಿರಗಳ ಲೆಕ್ಕಾಚಾರದ ಮಂಡಿಸಲಾಯಿತು.
ಸಭೆಯಲ್ಲಿ ಚಿಕ್ಕೋಡಿ /ಅಥಣಿ ಜಿಲ್ಲೆಗಳ ಅನುಗುಣವಾಗಿ ಪ್ರತ್ಯೇಕಿಸುವ ಬಗ್ಗೆ ಪ್ರಸ್ತಾಪ ಮಾಡಲಾಯಿತು.ಅಕ್ಟೊಬರ್ -2ರ ಗಾಂಧಿ ಜಯಂತಿ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.ಯೋಜನೆಯ ಇತರ ಎಲ್ಲಾ ಕಾರ್ಯಕ್ರಮಗಳಲ್ಲಿ ಜನಜಾಗೃತಿ ಸದಸ್ಯರ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚಿಸಲಾಯಿತು.2025-26 ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾಯೋಜನೆಯ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು.ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಪದಾಧಿಕಾರಿಗಳಿಂದ ಸೂಕ್ತ ಸಲಹೆ, ಮಾಹಿತಿ ಪಡೆಯಲಾಯಿತು.ಸಭೆಯನ್ನು ಉದ್ದೇಶಿಸಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಪಾಲ ಮುನ್ನೊಳ್ಳಿ, ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ, ಜಿಲ್ಲಾ ಸಂಘಟನಾ ಅಧ್ಯಕ್ಷರಾದ ಶ್ರೀ ಸಂಜಯ್ ನಾಡಗೌಡ ರವರು ಮಾತನಾಡಿದರು.ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಎಲ್ಲ ಉಪಾಧ್ಯಕ್ಷರುಗಳು, ಕೋಶಾಧಿಕಾರಿ, ತಾಲೂಕು ಕಾರ್ಯದರ್ಶಿಗಳು, mis ಯೋಜನಾಧಿಕಾರಿಗಳು, ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ್ ಏನ್, ಜಿಲ್ಲಾ ವಿಜಕ್ಷಣಾಧಿಕಾರಿ ಶ್ರೀ ಗೋಪಾಲ್, ಜನಜಾಗೃತಿ ಮೇಲ್ವಿಚಾರಕ ಉಮೇಶ್,ಚಿಕ್ಕೋಡಿ ಜಿಲ್ಲಾ ಕಛೇರಿ ನಿರ್ವಾಹಣಾ ಸಹಾಯಕ ಶ್ರೀ ಬಸವರಾಜ ಉಪಸ್ಥಿತರಿದ್ದರು.ಚಿಕ್ಕೋಡಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ವಿಠ್ಠಲ್ ಸಾಲಿಯಾನ್ ಸಭೆಯನ್ನು ನಿರೂಪಿಸಿದರು, ಅಥಣಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ನಾಗರತ್ನ ಹೆಗಡೆ ವಂದಿಸಿದರು.
