ಚಿಕ್ಕಹುಣಸೂರು ಯೋಜನಾ ಕಛೇರಿ ವ್ಯಾಪ್ತಿಯ ಬನ್ನಿ ಕುಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಚಿಕ್ಕ ಹುಣಸೂರು ಯೋಜನಾ ಕಛೇರಿ ವ್ಯಾಪ್ತಿಯ ಬನ್ನಿ ಕುಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಾಗೇಗೌಡರು ಸರ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಯುತ ಸೋಮಶೇಖರ್ ಉಪನ್ಯಾಸಕರು ದುಶ್ಚಟಗಳ ಬಗ್ಗೆ ಮತ್ತು ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಚಿಕ್ಕ ಹುಣಸೂರು ಯೋಜನಾ ಕಛೇರಿ ಯೋಜನಾಧಿಕಾರಿಗಳಾದ ಶ್ರೀಯುತ ಧನಂಜಯ್, ಜನಜಾಗೃತಿ ವೇದಿಕೆ ಸದಸ್ಯರಾದ ಉಮೇಶ್ ರವರು ಉಪನ್ಯಾಸಕರಾದ ಶ್ರೀಮತಿ ನಿಂಗಾಮಣಿ ಮತ್ತು ಶ್ರೀಮತಿ ರೇವತಿ, ಬಸವರಾಜ್ , ವಲಯದ ಮೇಲ್ವಿಚಾರಕದ ಶ್ರೀಮತಿ ರೇಖಾ, ಸೇವಾ ಪ್ರತಿನಿಧಿಯಾದ ಪವಿತ್ರ, ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಮಾಜ ಕಟ್ಟುವಲ್ಲಿ ಯುವಜನರ ಪಾತ್ರ & ಮಾದಕ ವಸ್ತು ಸೇವನೆಯನ್ನು ನಿಯಂತ್ರಿಸುವಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು.