ಮೈಸೂರು ಪ್ರಾದೇಶಿಕ ವಿಭಾಗದ ಕೆ ಆರ್ ನಗರ ಜಿಲ್ಲಾ ವ್ಯಾಪ್ತಿಯ ಚಿಕ್ಕಹುಣಸೂರು ಬಿಳಿಕೆರೆಯಲ್ಲಿ ನಡೆದ 1878 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರು ಮಾನ್ಯ ಸಂಸದರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಇವರು ಆಗಮಿಸಿ ಶಿಬಿರಾರ್ಥಿಗಳಿಗೆ ಹಾಗೂ ಎಲ್ಲರಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಮತ್ತು ಕ್ಷೇತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದಿವ್ಯ ಸಾನಿಧ್ಯದಲ್ಲಿ ಶ್ರೀ ಸಾಂಬಸದಾಶಿವ ಮಹಾಸ್ವಾಮಿಗಳು ಹಾಗೂ ಉಪಸ್ಥಿತಿಯಲ್ಲಿ ಶ್ರೀ ಹಂದನಳ್ಳಿ ಸೋಮಶೇಖರ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಬಿಳಿಕೆರೆ ಪ್ರಸನ್ನ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮೈಸೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿಗಳಾದ ಶ್ರೀ ಮಾಧವನಾಯಕ, ಶ್ರೀ ಧನಂಜಯ ಬಿ. ಯೋಜನಾಧಿಕಾರಿಗಳು, ತರಬೇತಿ ಕೇಂದ್ರದ ಯೋಜನಾಧಿಕಾರಿಯವರಾದ ಶ್ರೀ ದಿನೇಶ್, ಶಿಬಿರಾಧಿಕಾರಿ ಶ್ರೀ ವಿದ್ಯಾಧರ್ ಮತ್ತು ಶ್ರೀ ರಮೇಶ್, ಆರೋಗ್ಯ ಕಾರ್ಯಕರ್ತರಾದ ಶ್ರೀಮತಿ ಜಯಲಕ್ಷ್ಮೀ, ವಲಯದ ಮೇಲ್ವಿಚಾರಕರಾದ ವೀಣಾ, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು, ಶಿಬಿರಾರ್ಥಿಗಳು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.