ಪರಮಪೂಜ್ಯ ಡಾ| ಡಿ. ವಿರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಚಿಕ್ಕಮಗಳೂರು ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಚಿಕ್ಕಮಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಚಿಕ್ಕಮಗಳೂರು ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೆಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನವಜೀವನ ಸಮಿತಿ, ಧರ್ಮಸ್ಥಳ ಶೌರ್ಯ ವಿಪತ್ತು ಘಟಕ ಚಿಕ್ಕಮಗಳೂರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಗ್ರಾಮ ಪಂಚಾಯಿತಿ ಅಂಬಳೆ, ವಲಯ ಸ್ಥಳೀಯ ಸಂಘ ಸಂಸ್ಥೆಗಳ ದಾನಿಗಳ ಸಹಕಾರದೊಂದಿಗೆ ಜರಗುವ 1831 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ನಾಗರಾಜ್ ಕುಲಾಲ್ ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಚಿತ್ರದುರ್ಗ ಇವರು ಪ್ರಾಸ್ತವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರಂಭ, ನಡೆದು ಬಂದ ಹಾದಿ, ಅಭಿವೃದ್ಧಿ, ಪೂಜ್ಯರ ಕನಸಿನ ಕಾರ್ಯಕ್ರಮಗಳು, ಜನಜಾಗೃತಿ ವೇದಿಕೆ ಆರಂಭ, ಜನಜಾಗೃತಿ ವೇದಿಕೆ ಮೂಲಕ ನಡೆಯುವ ಮದ್ಯವರ್ಜನ ಶಿಬಿರ ಹಾಗೂ ಪಾನಮುಕ್ತ ಸಂಘಟನೆ ಕುರಿತು ವಿಸ್ತರಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಜಿ. ಕೃಷ್ಣಮೂರ್ತಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಚಿಕ್ಕಮಗಳೂರು ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಬಸವರಾಜ್ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ 1831 ನೇ ಮದ್ಯವರ್ಜನ ಶಿಬಿರ ಇವರು ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀ ಚಂದ್ರಪ್ಪ ಎ. ಸಿ. ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಚಿಕ್ಕಮಗಳೂರು ಜಿಲ್ಲೆ, ಶ್ರೀ ಸದಾನಂದ ಬಂಗೇರ ಜಿಲ್ಲಾ ನಿರ್ದೇಶಕರು, ಶ್ರೀ ರಮೇಶ್ ಕ್ಷೇತ್ರ ಯೋಜನಾಧಿಕಾರಿಗಳು ಚಿಕ್ಕಮಗಳೂರು ತಾಲೂಕು 1, ಶ್ರೀ ರಾಜೇಶ್ ಸಂಪಾದಕರು ಅಕ್ಷರ ತೋರಣ ಪತ್ರಿಕೆ ಚಿಕ್ಕಮಗಳೂರು, ಶ್ರೀ ರಮೇಶ್ ಗೌಡ ಅಧ್ಯಕ್ಷರು ಹಿರೇ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ (ರಿ.) ಅಂಬಳೆ, ಶ್ರೀ ಶಿವಕುಮಾರ್ ಅಧ್ಯಕ್ಷರು ಹಿರೇ ಬೀರಲಿಂಗೇಶ್ವರ ಸಮುದಾಯ ಭವನ ಅಂಬಳೆ, ಶ್ರೀಮತಿ ವಿಜಯಮ್ಮ ಗ್ರಾಮ ಪಂಚಾಯತಿ ಸದಸ್ಯರು, ಶ್ರೀ ಕೋಟೆ ಮಲ್ಲೇಶ್ ಉಪಾಧ್ಯಕ್ಷರು 1238 ನೇ ಮದ್ಯವರ್ಜನ ಶಿಬಿರ, ಶ್ರೀ ಕುಮಾರ್ ಆರ್. ಶೆಟ್ಟಿ ಕಾರ್ಯದರ್ಶಿಗಳು ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು, ಶ್ರೀ ಕುಮಾರ್ ಟಿ. ಶಿಬಿರಾಧಿಕಾರಿ, ಶ್ರೀಮತಿ ಜಯಲಕ್ಷ್ಮಿ ಆರೋಗ್ಯ ಸಹಾಯಕಿ, ಶ್ರೀ ರುದ್ರಪ್ಪ ಹೂಗಾರ್ ಜನಜಾಗೃತಿ ಮೇಲ್ವಿಚಾರಕ ಚಿತ್ರದುರ್ಗ ಪ್ರಾದೇಶಿಕ ವಿಭಾಗ, ಶ್ರೀಮತಿ ರೂಪ ಮೇಲ್ವಿಚಾರಕರು ಅಂಬಳೆ ವಲಯ, ಅಂಬಳೆ ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಊರಿನ ಗುರು ಹಿರಿಯರು, ನವಜೀವನ ಸಮಿತಿ ಸದಸ್ಯರು, ಶೌರ್ಯ ಘಟಕದ ಸ್ವಯಂಸೇವಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
