ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆಯ 2023-24ನೇ ಸಾಲಿನ ಪ್ರಥಮ ದಿನದ ವೇದಿಕೆ ಸಭೆ

Janajagurthi Vedike News

ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆಯ 2023-24ನೇ ಸಾಲಿನ ಪ್ರಥಮ ದಿನದ ವೇದಿಕೆ ಸಭೆಯು ಚಿಕ್ಕಮಗಳೂರು ಜಿಲ್ಲಾ ಕಛೇರಿಯಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಅರವಿಂದ ಸೋಮಯಾಜಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳು ಗತ ಸಭೆಯ ವರದಿಯನ್ನು ಮಂಡಿಸಿದರು. 2022-23ನೇ ಸಾಲಿನ ತಾಲೂಕ್ ವಾರು ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಯೋಜನಾಧಿಕಾರಿಗಳು ಮಂಡಿಸಿದರು. 2023 24 ರ ಕ್ರಿಯಾಯೋಜನೆಯಲ್ಲಿ ಜಿಲ್ಲಾ ವೇದಿಕೆಯ ಮೂಲಕ ಅನುಷ್ಠಾನ ಮಾಡಬೇಕಾದ ಕಾರ್ಯಕ್ರಮಗಳಾದ ಮದ್ಯವರ್ಜನ ಶಿಬಿರ, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನ, ವಿಶ್ವ ಮಾದಕ ವಸ್ತು ವಿರೋಧಿ ದಿನ, ನವಜೀವನ ಸಮಾವೇಶ,ಪೋಷಕರ ಆಯ್ಕೆ, ಸ್ವಾಸ್ತ್ಯ ಸಂಕಲ್ಪ ತರಬೇತುದಾರರ ತರಬೇತಿ, ಗಾಂಧಿ ಜಯಂತಿ ಕಾರ್ಯಕ್ರಮ, ಸುತ್ತೋಲೆ ಪ್ರಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಜಿಲ್ಲಾ ವೇದಿಕೆಗೆ ಪದಾಧಿಕಾರಿಗಳ ಸೇರ್ಪಡೆಯ ಬಗ್ಗೆ ಅಂತಿಮ ವರದಿ ಪದಕೊಳ್ಳಲಾಯಿತು.ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತುದಾರರ ಪಟ್ಟಿ ಮತ್ತು ತಾಲೂಕುವಾರು ನವಜೀವನ ಪೋಷಕರ ಪಟ್ಟಿಯನ್ನು ಈ ತಿಂಗಳ ಅಂತ್ಯದೊಳಗೆ ಪ್ರಾದೇಶಿಕ ಕಛೇರಿಗೆ ನೀಡುವಂತೆ ತಿಳಿಸಲಾಯಿತು. ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಗೀತಾ.ಬಿ ಮೇಡಂರವರು  ಅಗತ್ಯ ಮಾಹಿತಿ ಮಾರ್ಗದರ್ಶನ ನೀಡಿದರು. ಸ್ಥಾಪಕಾಧ್ಯಕ್ಷರಾದ ಪ್ರಶಾಂತ್ ಚಿಪ್ರಗುತ್ತಿ, ಜಿಲ್ಲಾ ನಿರ್ದೇಶಕರು, ವೇದಿಕೆ ಪದಾಧಿಕಾರಿಗಳು, ತಾಲೂಕ್ ಯೋಜನಾಧಿಕಾರಿಗಳು, ಪ್ರಾದೇಶಿಕ ಯೋಜನಾಧಿಕಾರಿಗಳು, ಜನಜಾಗೃತಿ ಮೇಲ್ವಿಚಾರಕರು ಉಪಸ್ಥಿತರಿದ್ದರು.