ಬೆಂಗಳೂರು ಪ್ರಾದೇಶಿಕ ವಿಭಾಗದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಯೋಜನಾ ಕಛೇರಿ ವ್ಯಾಪ್ತಿಯ ಜಾತವಾರ ಶ್ರೀ ರಾಮನುಜ ಸಮುದಾಯ ಭವನದಲ್ಲಿ ನಡೆದ 1826 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಶೀನಪ್ಪ ಎಂ. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಪೂಜ್ಯರ ಪ್ರೀತಿಯ ಕಾರ್ಯಕ್ರಮವೇ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ. ಶಿಬಿರಕ್ಕೆ ಸೇರಿ ಪಾನಮುಕ್ತ ಜೀವನವನ್ನು ನಡೆಸುವ ಮೂಲಕ ಪೂಜ್ಯರ ಪ್ರೀತಿಗೆ ಪಾತ್ರವಾಗಬೇಕೆಂದು ತಿಳಿಸಿದರು. “ಸಪ್ತ ವ್ಯಸನಗಳಲ್ಲಿ ಮದ್ಯಪಾನವೆಂಬುದು ಮೊದಲ ಮೆಟ್ಟಿಲು ಇದನ್ನು ಜಾರಿದರೆ ಉಳಿದ ಎಲ್ಲವನ್ನೂ ಜಾರಿದಂತೆ” ಎಂಬ ಪೂಜ್ಯರ ನುಡಿಯನ್ನು ಉಚ್ಚರಿಸುವ ಮೂಲಕ ಪೂಜ್ಯರ ಮದ್ಯವರ್ಜನ ಶಿಬಿರದ ಮೇಲಿನ ಪ್ರೀತಿ ಎಷ್ಟಿದೆ ಎನ್ನುವುದನ್ನು ನಾವು ಅರಿತು ಮುಂದಿನ ದಿನದಲ್ಲಿ ಪಾನಮುಕ್ತ ಜೀವನವನ್ನು ನಡೆಸಬೇಕೆಂದು ಶಿಬಿರಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಕರ್ನಾಟಕ ರಾಜ್ಯದಲ್ಲಿ 1826 ಮದ್ಯವರ್ಜನ ಶಿಬಿರಗಳ ಮೂಲಕ ಸುಮಾರು 175000ಕ್ಕೂ ಹೆಚ್ಚಿನ ಜನರ ಪಾನಮುಕ್ತ ಜೀವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯಲ್ಲಿ ಸಂಕಲ್ಪ ಮಾಡಿದ ಮೊದಲಿಗರಿದ್ದರೆ ಅದು ಪೂಜ್ಯ ಡಾ| ಡಿ. ವೀರೆಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಡಗ್ಗಡೆಯವರು ಮಾತ್ರ ಎಂದು ತಿಳಿಸಿದರು. ರಾಜ್ಯಾದ್ಯಂತ ಸುಮಾರು 175000ಕ್ಕೂ ಹೆಚ್ಚಿನ ಕುಟುಂಬಗಳು ಪಾನಮುಕ್ತ ಜೀವನವನ್ನು ನಡೆಸುತ್ತಾ ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯ ಜೀವನವನ್ನು ನಡೆಸಲು ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನಜಾಗೃತಿ ವೇದಿಕೆಯ ಕಾರ್ಯಕ್ರಮವಾದಂತಹ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ದಡಿಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಮಾರು 35ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು ಈ 35 ಕಾರ್ಯಕ್ರಮಗಳಿಗಿಂತ ಹೆಚ್ಚಿನ ಪುಣ್ಯದ ಕೆಲಸವನ್ನು ಜನಜಾಗೃತಿ ವೇದಿಕೆಯ ಕಾರ್ಯಕ್ರಗಳ ಮೂಲಕ ಅನುಷ್ಠಾನವನ್ನು ಮಾಡಲಾಗಿದೆ ಎಂದು ವತ್ಸಲ್ಯಮಯಿ ಹೇಮಾವತಿ ಅಮ್ಮನವರೇ ಹೇಳಿದ್ದಾರೆಂದು ಅಮ್ಮನವರ ಮಾತನ್ನು ಸ್ಮರಿಸಿದರು. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 2765 ಸ್ವಸಹಾಯ ಸಂಘಗಳ ಮೂಲಕ ಸುಮಾರು 22490ಕ್ಕೂ ಹೆಚ್ಚಿನ ಕುಟುಂಬದವರು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಪೂಜ್ಯರು ಮತ್ತು ಮಾತೃಶ್ರೀ ಅಮ್ಮನವರ ದೂರದೃಷ್ಠಿಯ ಚಿಂತನೆಗಳೇ ಕಾರಣವೆಂದು ತಿಳಿಸಿದರು. ಪೂಜ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದಾರ್ಮಿಕ ಕ್ಷೇತ್ರಗಳಿಗೆ, ಹೈನುಗಾರಿಕೆ, ಸುಜ್ಞಾನನಿಧಿ, ಜ್ಞಾನವಿಕಾಸ ಕಾರ್ಯಕ್ರಮ, ಕೆರೆ ಹೂಳೆತ್ತುವ ಕಾರ್ಯಗಳಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದಲ್ಲದೆ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳಿಂದ ಗಾಂಧೀಜಿಯವಯರು ಕಂಡಂತಹ ರಾಮರಾಜ್ಯದ ಕನಸನ್ನು ಹೆಗ್ಗಡೆ ದಂಪತಿಗಳು ನನಸನ್ನು ಮಾಡಿದ್ದಾರೆಂದು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
