ಚಿಕ್ಕಜಾಜೂರು ತಾಲೂಕಿನಲ್ಲಿ 1818 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ತಾಲೂಕಿನ ಶ್ರೀ ಬನಶಂಕರಿ ದೇವಿ ಕಲ್ಯಾಣ ಮಂಟಪ ಮಲ್ಲಾಡಿಹಳ್ಳಿಯಲ್ಲಿ 1818 ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪಿ. ರಮೇಶ್ ಮಾಜಿ ಶಾಸಕರು ಹೊಳಲ್ಕೆರೆ ರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಿ. ಪುಟ್ಟಸ್ವಾಮಿ ನಿವೃತ್ತ ಶಿಕ್ಷಕರು ಹಾಗೂ ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಮಲ್ಲಾಡಿಹಳ್ಳಿ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಚೈತ್ರ ಪಿ. ಎಸ್. ಐ ಪೊಲೀಸ್ ಠಾಣೆ ಹೊಳಲ್ಕೆರೆ, ಶ್ರೀ ಜಿ. ಆರ್. ರಮೇಶ್ ಗೌಡರು ಸದಸ್ಯರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಚಿತ್ರದುರ್ಗ, ಶ್ರೀಮತಿ ಸರಸ್ವತಿ ಸದಸ್ಯರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.)ಚಿತ್ರದುರ್ಗ, ಶ್ರೀ ಸಂತೋಷ್ ಬಿ.ಎಂ ಸಮಿತಿ ಉಪಾಧ್ಯಕ್ಷರು ಮಲ್ಲಾಡಿಹಳ್ಳಿ, ಶ್ರೀಮತಿ ಅಂಬಿಕಾ ಗ್ರಾಮ ಪಂಚಾಯತ್ ಸದಸ್ಯರು, ಶ್ರೀಮತಿ ಗೀತಮ್ಮ ಗ್ರಾಮ ಪಂಚಾಯತ್ ಸದಸ್ಯರು, ಶಿಬಿರಾಧಿಕಾರಿ ಶ್ರೀ ಚಿತ್ತರಂಜನ್, ಶ್ರೀ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ಪಿಲೋಮೀನಾ ಡಿ’ಸೋಜಾ, ವಲಯ ಮೇಲ್ವಿಚಾರಕರು, ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಮೇಲ್ವಿಚಾರಕರಾದ ರುದ್ರಪ್ಪ, ಊರಿನ ಗಣ್ಯರು, ಪೋಲಿಸ್ ಇಲಾಖೆ ಸಿಬ್ಬಂದಿಗಳು, ವಲಯದ ಸೇವಾ ಪ್ರತಿನಿಧಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.