ಚಿಂಚೋಳಿ ಯೋಜನಾಕಛೇರಿ ವ್ಯಾಪ್ತಿಯ ಸುಲೇಪೇಟ ವಲಯದಲ್ಲಿ ಮಹಾಂತೇಶ್ವರ ಸಭಾ ಭವನದಲ್ಲಿ ರಾಷ್ಟ್ರಪಿತಾಮಹ ಮಹಾತ್ಮಾ ಗಾಂಧೀಜಿ ಅವರ 154ನೇ ಜನ್ಮದಿನದ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಥಾ ಕಾರ್ಯಕ್ರಮ ಮತ್ತು ಮಾಜಿ ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ದುಶ್ಚಟಗಳ ವಿರುದ್ಧ ಜಾಥಾಕ್ಕೆ ಕಲಬುರಗಿ ಜಿಲ್ಲಾ ನಿರ್ದೇಶಕರು ಶ್ರೀ ಸತೀಶ ಸುವರ್ಣ ಸರ್ ಬಲೂನ್ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಶ್ರೀ ಸುಖಾನಂದ ಸಿಂಗೆ (ಆರಕ್ಷಕ ಉಪನಿರೀಕ್ಷಕರು ಪೊಲೀಸ್ ಠಾಣೆ ಸುಲೇಪೇಟ ) ಅವರು ನೆರವೇರಿಸಿ ಯೋಜನೆಯ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ಮಾತನಾಡಿದರು ಸಂಪನ್ಮೂಲ ವ್ಯಕ್ತಿ ಶ್ರೀ ರಾಜೇಶೇಖರ ಹೊಕ್ರಾಣಿ ಅವರು ದುಶ್ಚಟಗಳ ಕುರಿತು ಜಾಗೃತಿ ನೀಡಿದರು ಕಾರ್ಯಕ್ರಮದಲ್ಲಿ ಸ್ವ- ಸಹಾಯ ಸಂಘದ ಸದಸ್ಯರಿಂದ ಜಾಥಾಕಾರ್ಯಕ್ರಮವನ್ನು ನೆರವೇರಿಸಲಾಯಿತು ಈ ಸಂದರ್ಭದಲ್ಲಿ.ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿಗಳು ರಾಜೇಶ್. ಕೆ ತಾಲೂಕಿನ ಯೋಜನಾಧಿಕಾರಿಗಳಾದ ನಾಮದೇವದೇಶಪಾಂಡೆ ಎಲ್ಲಾ ಮೇಲ್ವಿಚಾರಕಶ್ರೇಣಿ ಸಿಬ್ಬಂದಿಗಳು ಹಾಗೂ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
