ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಹಿರಿಯೂರು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೈನ ಭವನದಲ್ಲಿ ನಡೆದ 1846 ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಟಿ. ರಘುಮೂರ್ತಿ ಶಾಸಕರು ಚಳ್ಳಕೆರೆ ವಿಧಾನಸಭೆ ಕ್ಷೇತ್ರ,
ಹಾಗೂ ಅಧ್ಯಕ್ಷರು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರ ಬೆಂಗಳೂರು ಇವರು ನೆರವೇರಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ಪಿ. ಓಂಕಾರಪ್ಪ, ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಕೆ. ಆರ್., ಸಮಿತಿಯ ಅಧ್ಯಕ್ಷರಾದ ಶ್ರೀ ಸಾಲ್ವೆಂಟ್ ಪ್ರಕಾಶ್, ಜಿಲ್ಲಾ ವೇದಿಕೆಯ ಸದಸ್ಯರಾದ ಶ್ರೀ ನೇತಾಜಿ ಪ್ರಸನ್ನ, ಶ್ರೀ ಕಿಶೋರ್ ಕುಮಾರ್ ಶೆಟ್ಟಿ, ಶ್ರೀ ವಿಷ್ಣುಮೂರ್ತಿ ರಾವ್, ಶ್ರೀ ಜಗದೀಶ್, ಯೋಜನಾಧಿಕಾರಿಗಳಾದ ಶಶಿಕಲಾ ಉಪಸ್ಥಿತರಿದ್ದರು.
