ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಹಾಗೂ ರುಡ್ಸೆಟ್ ಸಂಸ್ಥೆ ಗಾಂಧಿನಗರ ಧಾರವಾಡ ಸಹಯೋಗದಲ್ಲಿ ಧಾರವಾಡ ಪ್ರಾದೇಶಿಕ ವಿಭಾಗದ ಆಯ್ದ ನವಜೀವನ ಸಮಿತಿ ಸದಸ್ಯರಿಗೆ ದಿನಾಂಕ 15/09/2022 ರಿಂದ 24/09/2022 ರವರಿಗೆ ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಆಯೋಜನೆ ಮಾಡಲಾಗಿದ್ದು, ಯೋಜನೆಯ ಹಿರಿಯ ಅಧಿಕಾರಿಗಳ ಸಹಕಾರ ಹಾಗೂ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಹಾಗೂ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ ರವರ ವಿಶೇಷ ಮಾರ್ಗದರ್ಶನದಿಂದ ಯಶಸ್ವಿಯಾಗಿ ನಡೆದಿದ್ದು, ತರಬೇತಿ ಕಾರ್ಯಕ್ರಮದ ಕೊನೆಯ ದಿನವಾದ ಇಂದು ನಡೆಸಲಾದ ಸಮಾರೋಪ ಸಮಾರಂಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ ಹಾಗೂ ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಆರ್ ಶೆಟ್ಟಿ, ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ ಕಟ್ಟಿಮನಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಶ್ರೀ ನಾಗೇಶ್ ವೈ. ಎ ಉಪನ್ಯಾಸಕರಾದ ಶ್ರೀ ಬಸವರಾಜ್ ಶ್ರೀ ಚನ್ನಪ್ಪ ಉಪಸ್ಥರಿದ್ದರು. ಈ ಕಾರ್ಯಕ್ರಮದ ಮೂಲಕ 42 ಮಂದಿಗೆ ಸ್ವಉದ್ಯೋಗದ ಹೊಸ ಅವಕಾಶ ಸಿಕ್ಕಿದೆ.
