ಗಾಂಧೀಜಿ ಕನಸಿನ ರಾಮ ರಾಜ್ಯವನ್ನು ನನಸುಮಾಡುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು- ಶ್ರೀ ವಿಠಲ್ ತಲ್ವಾರ್ ಪೊಲೀಸ್ ಠಾಣಾಧಿಕಾರಿಗಳು ಅಭಿಮತ

Janajagurthi Vedike News

ಬಂಗಾರಪೇಟೆ: ಬೆಂಗಳೂರು ಪ್ರಾದೇಶಿಕ ವಿಭಾಗದ ಬಂಗಾರಪೇಟೆ ತಾಲೂಕಿನ ಕೆ.ಸಿ.ಆರ್ ಸಭಾಭವನದಲ್ಲಿ 1602 ನೆಯ ಮಧ್ಯವರ್ಜನ ಶಿಬಿರವನ್ನು ಕಾಮಸಮುದ್ರ ಪೊಲೀಸ್ ಠಾಣಾಧಿಕಾರಿಗಳಾದ ಶ್ರೀ ವಿಟ್ಟಲ್ ತಳವಾರ್ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕಾವೇರಿ ಆದಿನಾರಾಯಣ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಶ್ರೀ ಮುರಳಿಧರ್ ಶೆಟ್ಟಿ ಯವರು, ಸಮಿತಿಯ ಗೌರವ ಅಧ್ಯಕ್ಷರು ಶ್ರೀನಿವಾಸಮೂರ್ತಿ, ಸಮಿತಿಯ ಅಧ್ಯಕ್ಷರು ಲಕ್ಷ್ಮೀನಾರಾಯಣ ಪ್ರಸಾದ್, ಜನಜಾಗೃತಿ ಸದಸ್ಯರಾದ ಶ್ರೀ ನಾಗರಾಜ್, ಶ್ರೀಮತಿ ಮಂಜುಳಾ, ಶ್ರೀ ಮಂಜುನಾಥ, ಕೆ ವಿ ರಾಮಪ್ಪ, ಶ್ರೀಮತಿ ಅರುಣ, ತಾಲೂಕು ಯೋಜನಾಧಿಕಾರಿಗಳು ಸ್ವಾಗತಿಸಿದರು, ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮೇಲ್ವಿಚಾರಕರಾದ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು ಮಾದಪ್ಪ ರವರು ಧನ್ಯವಾದ ಸಮರ್ಪಿಸಿದರು. ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಾಯಕ್ಕೆ ಶ್ರೀಮತಿ ನೇತ್ರಾವತಿ, ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.