ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ :

Janajagurthi Vedike News

ದೇವನಹಳ್ಳಿ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಇವುಗಳ ವತಿಯಿಂದ ದೇವನಹಳ್ಳಿ ತಾಲೂಕಿನ ಶ್ರೀ ಕುಂಬೇಶ್ವರ ಪಾರ್ಟಿ ಹಾಲ್ ದೇವನಹಳ್ಳಿ ಯಲ್ಲಿ 152 ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ ನಡೆಯಿತು.ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಜನಜಾಗೃತಿ ಘೋಷಣೆಗಳ ಮೂಲಕ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ ಬಿ ಕೆ ನಾರಾಯಣಸ್ವಾಮಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ನಿಸರ್ಗ ಎಲ್. ಎನ್ ನಾರಾಯಣಸ್ವಾಮಿ ರವರು ನಡೆಸಿ ಗಾಂಧೀಜಿಯ ರಾಮರಾಜ್ಯದ ಕನಸನ್ನು ಧರ್ಮಸ್ಥಳದ ಪರಮಪೂಜ್ಯರಾದ ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ಬೇಕಾಗುವ ಉತ್ತಮ ಕೆಲಸಗಳನ್ನು ಯೋಜನೆಯ ಕಾರ್ಯಕ್ರಮಗಳ ಮೂಲಕ ಮಾಡುತ್ತಿದ್ದಾರೆ ಅದರಿಂದ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳಲು ನನಗೆ ತುಂಬಾ ಖುಷಿಯಾಗುತ್ತದೆ ನನಗೆ ಯಾವುದೇ ಕೆಲಸ ಗಳಿದ್ದಲ್ಲಿ ಧರ್ಮಸ್ಥಳ ಕಾರ್ಯಕ್ರಮಗಳಿಗೆ ಭಾಗವಹಿಸುತ್ತೇನೆ ಅವರಿಗೆ ಮತ್ತು ಶ್ರೀಕ್ಷೇತ್ರಕ್ಕೆ ವಿಶೇಷವಾದ ಅಭಿನಂದನೆಗಳು ಎಂದು ಸಂತಸ ವ್ಯಕ್ತಪಡಿಸಿದರು. ಪುರಸಭೆ ಅಧ್ಯಕ್ಷರು ಶ್ರೀಮತಿ ರೇಖಾ ವೇಣುಗೋಪಾಲ್ ರವರು ಉಪ ಪೊಲೀಸ್ ಅದೀಕ್ಷಕರು ಬೇಗಳೂರು ಗ್ರಾಮಾಂತರ ಜಿಲ್ಲೆ ಶ್ರೀ ಶ್ರೀ ರಂಗಪ್ಪರವರು ಉಪ ನಿರ್ದೇಶಕರು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶ್ರೀ ಎ. ತಿಪ್ಪೇಸ್ವಾಮಿರವರು ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇ. ಧ. ಗ್ರಾ. ಯೋಜನೆ ಬಿ. ಸಿ ಟ್ರೆಸ್ಟ್( ರಿ) ಬೆಂಗಳೂರು ಗ್ರಾಮಾಂತರ ಜಿಲ್ಲೆ ಸತೀಶ್ ನಾಯ್ಕ್, ಉಪಾಧ್ಯಕ್ಷರು ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಬೆಂಗಳೂರು ಶ್ರೀಮತಿ ವೀಣಾ ರಮೇಶ್ ರವರು, ಉಪನ್ಯಾಸ ಮುಖ್ಯಪಾಧ್ಯಾಯರು ಅಗರೇಕನಹಳ್ಳಿ ಸರಕಾರಿ ಪ್ರೌಢಶಾಲೆ ಚಿಕ್ಕಬಳ್ಳಾಪುರ ಶ್ರೀಮತಿ ಆಶಾ ಸುರೇಶ್ ರವರು ಹಾಗೂ ಗೌರವ ಉಪಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ /ನಗರ /ಜನ ಜಾಗೃತಿ ವೇದಿಕೆ ಸದಸ್ಯರು ಶ್ರೀ ಬಲಮುರಿ ಶ್ರೀ ನಿವಾಸ್ ಮೂರ್ತಿ ದೇವನಹಳ್ಳಿ ಶ್ರೀ ಟಿ. ವೆಂಕಟೇಶ್ ಹೊಸಕೋಟೆ ಶ್ರೀ ಜಿ ಶಂಕರಪ್ಪ ದೊಡ್ಡಬಳ್ಳಾಪುರ ಶ್ರೀಮತಿ ಜಿ. ಹೆಚ್. ಕೋಕಿಲ ಯಲಹಂಕ ಶ್ರೀ ಪಿ. ಎನ್. ಪ್ರಸನ್ನ ಕುಮಾರ್ ಆನೇಕಲ್ ಶ್ರೀ ನರಸಿಂಹ ರಾಜು ವಿ. ಎಂ. ದೇವನಹಳ್ಳಿ ಶ್ರೀ ಹರೀಶ್ ವಿ ಹೊಸಕೋಟೆ ಶ್ರೀ ವೆಂಕಟೇಶ್ ಬಿ. ಎ ದೊಡ್ಡಬಳ್ಳಾಪುರ ಶ್ರೀ ಬೈಲ ಮೂರ್ತಿ ನೆಲಮಂಗಲ ಶ್ರೀ ಭಾರ್ಗವ ಆನೇಕಲ್ .ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಖಾವಂದರ ಹಾಗೂ ಕಾರ್ಯನಿರ್ವಾಹಕರ ನಿರ್ದೇಶಕರ ಸಂದೇಶವನ್ನು ತಿಳಿಸಲಾಯಿತು.ನವಜೀವನ ಸಮಿತಿಯ ಸದಸ್ಯರಾದ ನಾರಾಯಣ ಸ್ವಾಮಿ. ಭಾಗ್ಯ ತಮ್ಮ ಅನುಭವ ಹಂಚಿಕೊಂಡರು ಪ್ರಸ್ತಾವಿಕಮಾತಿನೊಂದಿಗೆ ಎಲ್ಲರನ್ನು ದೇವನಹಳ್ಳಿ ಯೋಜನಾಧಿಕಾರಿಗಳು ಅಕ್ಷತಾ ರೈ ಸ್ವಾಗತಿಸಿದರು.
ಈ ಸಂದರ್ಭ ಶಾಸಕರಿಗೆ ಮಂಡನೆ ಮಾಡುವ ಹಕ್ಕೊತ್ತಾಯದ ವಾಚನವನ್ನು ಯೋಜನಾಧಿಕಾರಿ ಪಾತ ಲಿಂಗಪ್ಪ ರವರು ನೆರವೇರಿಸಿದರು. ಜಿಲ್ಲೆಯ ಯೋಜನಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರ ನವಜೀವನ ಪೋಷಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ತಾಲೂಕು ಯೋಜನಾಧಿಕಾರಿ ಭೋಜನಿರ್ವಹಿಸಿದರು.