ಖಾನಾಪುರದಲ್ಲಿ ಮದ್ಯವರ್ಜನ ಶಿಬಿರದ ಪೂರ್ವ ಭಾವಿ ಸಭೆ

Janajagurthi Vedike News

ಬೆಳಗಾಂ ಜಿಲ್ಲಾ ವ್ಯಾಪ್ತಿಯ ಖಾನಾಪುರ ತಾಲೂಕಿನ ನಂದಗಡ ವಲಯದಲ್ಲಿ ನವಂಬರ್ ತಿಂಗಳಲ್ಲಿ ನಡೆಯುವ ಮ.ಶಿಬಿರದ ಸಮಾಲೋಚನಾ ಸಭೆ ನಡೆಯಿತು. ಜಿಲ್ಲೆಯ ನಿರ್ದೇಶಕರಾದ ಸತೀಶ ನಾಯ್ಕ ರವರು ಯೋಜನೆ ಮತ್ತು ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಸವರಾಜ ಸೊಪ್ಪಿಮಠ ಸದಸ್ಯರಾದ ಶಂಕರ ಸೋನಾಲಿ, ಯಲ್ಲಪ್ಪ ಸಾಗರ, ನಂದಗಡ ವಲಯದ 10 ಒಕ್ಕೂಟದ ಪದಾಧಿಕಾರಿಗಳು, ನವಜೀವನ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು ಉಪಸ್ಥಿತರಿದ್ದರು. ಮಧ್ಯವರ್ಜನ ಶಿಬಿರದ ರೂಪ ರೇಷ, ಶಿಬಿರಾರ್ಥಿಗಳ ಆಯ್ಕೆ ಸಮಿತಿಯ ಜವಾಬ್ದಾರಿ, ಸಂಪನ್ಮೂಲ ಕ್ರೂಡೀಕರಣದ ಕುರಿತು ಜನ ಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಮಾಹಿತಿ ನೀಡಿದರು. ಯೋಜನಾಧಿಕಾರಿ ಗಣಪತಿ ನಾಯ್ಕರವರು ಸಭೆಯನ್ನ ಉತ್ತಮ ರೀತಿಯಲ್ಲಿ ಸಂಘಟಿಸಿ ಅತಿಥಿಗಳನ್ನು ಸ್ವಾಗತಿಸಿದರು. ಮೇಲ್ವಿಚಾರಕ ಮಹಾಂತೇಶ್ ಸಭೆಯನ್ನು ನಿರೂಪಿಸಿ ಯಶಸ್ವಿಗೊಳಿಸಿದರು. ಈ ಸಂದರ್ಭ ಹದಿನೈದು ಮಂದಿ ಇಂದ ಕೂಡಿದ ಸಮಿತಿಯನ್ನು ರಚಿಸಲಾಯಿತು. ಶಿಬಿರದ ಖರ್ಚಿನ ಅರ್ಧದಷ್ಟು ಮೊತ್ತದ ವಸ್ತುರೂಪದ ವಾಗ್ದಾನ ನಡೆಯಿತು.