ಕೊಪ್ಪ ತಾಲೂಕಿನ ಹರಿಹರಪುರ ವಲಯದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಕೆ ಟಿ ಕೆ ಸಭಾಭವನದಲ್ಲಿ ಜರಗಿತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಪರಮಪೂಜ್ಯ ಶಂಕರಾಚಾರ್ಯ ಶ್ರೀ ಶ್ರೀ ಜಗದ್ಗುರು ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಶ್ರೀ ಶಾರದಾ ಲಕ್ಷ್ಮಿನರಸಿಂಹ ಪೀಠಂ ಶ್ರೀಮಠ ಹರಿಹರಪುರ, ಎಲ್ಲಾ ಶಿಬಿರಾರ್ಥಿ ಕುಟುಂಬಕ್ಕೆ ವಿಶೇಷ ಆಶೀರ್ವಚನ ನೀಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಲ್ ಹೆಚ್ ಮಂಜುನಾಥ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ, ಟ್ರಸ್ಟ್ ರಿಜಿಸ್ಟರ್ ಧರ್ಮಸ್ಥಳ ಶ್ರೀಯುತರು ಮದ್ಯವರ್ಜನ ಶಿಬಿರದ ಸಮಾರೋಪ ಭಾಷಣದಲ್ಲಿ ಕೌಟುಂಬಿಕ ಸಾಮರಸ್ಯ, ಆಧ್ಯಾತ್ಮ ಚಿಂತನೆ, ಶಿಬಿರಾರ್ಥಿಗಳಿಗೆ ಅದ್ಭುತ ಮಾರ್ಗದರ್ಶನ ನೀಡಿದರು, ಸುಧಾಕರ್ ಶೆಟ್ಟಿ ಸಂಸ್ಥಾಪಕರು ಅಮ್ಮ ಪೌಂಡೇಶನ್, ಶುಭ ಹಾರೈಸಿದರು, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರು ಚಿಕ್ಕಮಂಗಳೂರು ಜಿಲ್ಲೆ ಅರವಿಂದ ಸೋಮಯಾಜಿಯವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸನ್ಮಾನ್ಯ ಶ್ರೀ ಟಿ ಡಿ ರಾಜೇಗೌಡ ಮಾನ್ಯ ಶಾಸಕರು ಶೃಂಗೇರಿ ವಿಧಾನಸಭಾ ಕ್ಷೇತ್ರ ಕರ್ನಾಟಕ ಸರ್ಕಾರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರಾರ್ಥಿಗಳ ಜೀವನಕ್ಕೆ ಶುಭಕೋರಿದರು, ಪ್ರಾದೇಶಿಕ ನಿರ್ದೇಶಕರುಗಳು ವಿವೇಕ್ ವಿನ್ಸೆಂಟ್ ಪಾಯಸ್ , ಹಾಗೂ ವಸಂತ್ ಸಾಲಿಯನ್ ಉಪಸ್ಥಿತರಿದ್ದರು.
