ಕೊಪ್ಪ ತಾಲೂಕಿನಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿಯ ಸಮಾವೇಶ ಕಾರ್ಯಕ್ರಮವು ಪುರ ಭವನದಲ್ಲಿ ಡಾ. ವಿಜಯ ಕುಮಾರ್ ಉಪ ನಿರ್ದೇಶಕರು ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾಹಿತಿ ನೀಡಿದರು. ನವಜೀವನ ಸದಸ್ಯರಿಗೆ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ. ಪಾಯಸ್ ರವರು ಮಾರ್ಗದರ್ಶನ ಮಾಡುತ್ತಾ ನವಜೀವನ ಸದಸ್ಯರು ಬೆಳವಣಿಗೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮ, ವ್ಯಕ್ತಿ ಮತ್ತು ಕುಟುಂಬ, ವ್ಯಕ್ತಿ ಮತ್ತು ಸಮಾಜದ ಬಗ್ಗೆ ಉಪನ್ಯಾಸ ಮಾಡಿದರು. ನವಜೀವನ ಸದಸ್ಯರ ಸಾಧನೆಗೆ ಜನಜಾಗೃತಿ ವೇದಿಕೆ ಎಲ್ಲಾ ರೀತಿಯಲ್ಲೂ ಸಹಕಾರ ಮಾಡಲಿದೆ ಎಂದು ಆಶಿಸಿದರು. ಜಿಲ್ಲಾ ನಿರ್ದೇಶಕರು ಪ್ರಕಾಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವೇದಿಕೆಯ ಅದ್ಯಕ್ಷರು ಅರವಿಂದ ಸೋಮಯಾಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉತ್ತಮವಾಗಿ ನವಜೀವನ ಸದಸ್ಯರ ಅನುಪಾಲನಾ ಮಾಡಿದ ಪೋಷಕರನ್ನು ಗುರುತಿಸಲಾಯಿತು. ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು,ಮೇಲ್ವಿಚಾರಕರ, ಪೋಷಕರು ತಾಲೂಕ್ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆಯ ಆಡಳಿತ ಯೋಜನಾಧಿಕಾರಿಗಳು, ವಿಪತ್ತು ಯೋಜನಾಧಿಕಾರಿಗಳು, ಪ್ರಾದೇಶಿಕ ಯೋಜನಾಧಿಕಾರಿಗಳು, ಆರೋಗ್ಯ ಸಹಾಯಕರು ಸೌಮ್ಯ, ಜನಜಾಗೃತಿ ಮೇಲ್ವಿಚಾರಕರು ಉಪಸ್ಥಿತರಿದ್ದರು.
