ಕೊಪ್ಪಳ ಪ್ರಾದೇಶಿಕ ವಿಭಾಗದ ಗದಗ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಗದಗ ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯನ್ನು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರೊ.ಹೆಚ್. ಬಿ.ಅಸೂಟಿ ಸರ್ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಯೋಗೀಶ್. A ಮತ್ತು ಜಿಲ್ಲಾ ಜನಜಾಗೃತಿ ಪದಾಧಿಕಾರಿಗಳು ಹಾಗೂ ಕ್ಷೇತ್ರ & ಜನಜಾಗೃತಿ ಯೋಜನಾಧಿಕಾರಿಗಳ ಉಪಸ್ಥಿಯಲ್ಲಿ ಸಭೆ ನಡೆಸಿ ಈ ಕೆಳಗಿನಂತೆ ವಿಷಯಗಳ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. 2023/2024 ಸಾಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ, ಮೇ.31 ವಿಶ್ವ ತಂಬಾಕು ವಿರೋಧಿ ದಿನಾಚರಣೆ ಜೂನ್.26 ಮಾದಕ ವಸ್ತುಗಳ ವಿರೋಧಿ ದಿನಾಚರಣೆ,ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ( ತಾಲೂಕಿಗೆ 10 ಕಾರ್ಯಕ್ರಮದಂತೆ),ಮಧ್ಯವರ್ಜನ ಶಿಬಿರ, ಜಿಲ್ಲಾ ಮಟ್ಟದ ನಮ್ಮ ಜೀವನ ಪೋಷಕರ ಸಭೆ, ನವಜೀವನೋತ್ಸವ ಕಾರ್ಯಕ್ರಮ, ಪಾನಮುಕ್ತ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿ, ವಲಯವಾರು ನವಜೀವನ ಸಮಿತಿ ರಚನೆ & ಬಲವರ್ಧನೆ, ಪಾನಮುಕ್ತ ಗ್ರಾಮ, ಸಾಮಾಜಿಕ ಅರಣ್ಯೀಕರಣ / ತಾಲೂಕುವಾರು 5000 ಗಿಡ ನಾಟಿ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ, ಪ್ರಾದೇಶಿಕ ಜನಜಾಗೃತಿ ವೇದಿಕೆಯ ಸಭೆ, ತರಬೇತಿದಾರರ ತರಬೇತಿ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು.