ಕೊಪ್ಪಳ ಪ್ರಾದೇಶಿಕ ವಿಭಾಗದ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಗಾಂಧಿಸ್ಮೃತಿ ಪಾನಮುಕ್ತರಿಗೆ ಅಭಿನಂದನೆ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಬೃಹತ್ ಜನಜಾಗೃತಿ ಜಾಥಾ ಬಳ್ಳಾರಿ ಜಿಲ್ಲೆಯ ಬಳ್ಳಾರಿ ಸಿಟಿ ಮದ್ಯಭಾಗದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗನಿಂದ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ನವಜೀವನ ಸದಸ್ಯರು, ಫಲಾನುಭವಿಗಳು,ಗಣ್ಯರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿರಿದರು.ಡೊಳ್ಳು ಕುಣಿತ, ಛದ್ಮವೇಶ, ಟ್ಯಾಬ್ಲೋ, ಜಾಥಾ ಕಾರ್ಯಕ್ರಮಕ್ಕೆ ಹೆಚ್ಚುವರಿ ಮೆರಗನ್ನ ನೀಡಿತ್ತು. ಗಾಂಧಿ ಸ್ಮೃತಿ ಕಾರ್ಯಕ್ರಮ: ಶ್ರೀ ನಾರಾ ಭರತ್ ರೆಡ್ಡಿ ಮಾನ್ಯ ಶಾಸಕರು ಬಳ್ಳಾರಿ ನಗರ, ಶ್ರೀ ವೈ.ಎಂ ಸತೀಶ್ ಮಾನ್ಯ ವಿಧಾನ ಪರಿಷತ್ ಸದಸ್ಯರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ, ಶ್ರೀ ಗಣೇಶ್.ಬಿ ಪ್ರಾದೇಶಿಕ ನಿರ್ದೇಶಕರು ಶ್ರೀ ಅಲ್ಲಂ ಪ್ರಶಾಂತ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಗಣಿ ಉದ್ಯಮಿಗಳು & ಗಣ್ಯರು ಗಾಂಧಿಜೀ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪ ನಮನ ಮಾಡಿದರು. ಹಕ್ಕೋತ್ತಾಯ ಮತ್ತು ಠರಾವು ಮಂಡನೆ ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಶ್ರೀ ಎಲ್. ವಿರೂಪಾಕ್ಷಪ್ಪ ನಿರ್ದೇಶಕರಾದ ಶ್ರೀ ರೋಹಿತಾಕ್ಷ & ಜನಜಾಗೃತಿ ಸದಸ್ಯರು ಠರಾವನ್ನು ಮಂಡಿಸಿದರು (ಹಸ್ತಾಂತರಿಸಿದರು). ಪಾನಮುಕ್ತರಿಗೆ ಅಭಿನಂದನೆ ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಜನ ಜಾಗೃತಿ ಪದಾಧಿಕಾರಿಗಳು ಪಾನಮುಕ್ತರಿಗೆ ಅಭಿನಂದಿಸಿದರು. ಸಾಧಕರಿಗೆ ಸನ್ಮಾನ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಪೂಜ್ಯರಿಂದ ಆಶೀರ್ವಚನ: ಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಕಲ್ಯಾಣ ಸ್ವಾಮಿ ಸಂಸ್ಥಾನ ಮಠ, ಕಮ್ಮರ್ ಚೇಡು ಬಳ್ಳಾರಿ, ಆಶೀರ್ವಚನದ ಸಂದೇಶ ನೀಡಿದರು.ಆಶಯ ಭಾಷಣ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್.ಬಿ. ರವರು ಗಾಂಧಿ ಜಯಂತಿ ಕಾರ್ಯಕ್ರಮದ ಕುರಿತಂತೆ ಜನಜಾಗೃತಿ ವೇದಿಕೆಯ ಸಾಧನೆಯ ವಿವರ ನೀಡಿದರು.ಗಣ್ಯರ ಉಪಸ್ಥಿತಿ ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದು, ಸಭೆಯಲ್ಲಿ ಶ್ರೀ ನಾರಾ ಭರತ್ ರೆಡ್ಡಿ ಮಾನ್ಯ ಶಾಸಕರು ಬಳ್ಳಾರಿ ನಗರ, ಶ್ರೀ ವೈ ಎಂ ಸತೀಶ್ ಮಾನ್ಯ ವಿಧಾನ ಪರಿಷತ್ ಸದಸ್ಯರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಶ್ರೀ ಗಣೇಶ್ ಬಿ, ಶ್ರೀ ಅಲ್ಲಂ ಪ್ರಶಾಂತ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಗಣಿ ಉದ್ಯಮಿಗಳು ಬಳ್ಳಾರಿ ಶ್ರೀ ವಿಜಯಾನಂದ ರೆಡ್ಡಿ, ಶ್ರೀ ಎಲ್ ವಿರೂಪಾಕ್ಷಪ್ಪ ಶ್ರೀ ರೋಹಿತಾಕ್ಷ, ಶ್ರೀ ಜನಾರ್ದನ್ ರೆಡ್ಡಿ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
