ಕೊಪ್ಪಳ ಪ್ರಾದೇಶಿಕ ವಿಭಾಗದ ಬಾಗಲಕೋಟ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಗಾಂಧಿ ಸ್ಮೃತಿ, ಪಾನಮುಕ್ತರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ನಡೆಸಲಾಯಿತು. ಬೃಹತ್ ಜನಜಾಗೃತಿ ಜಾಥಾ: ಬಾಗಲಕೋಟ ಜಿಲ್ಲೆಯ ಬಾಗಲಕೋಟ ಸಿಟಿ ಮದ್ಯಭಾಗದ ಕಾಳಿದಾಸ ಸರ್ಕಲ್ ನಿಂದ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ನವಜೀವನ ಸದಸ್ಯರು, ಫಲಾನುಭವಿಗಳು, ಗಣ್ಯರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿರಿದರು. ಡೊಳ್ಳು ಕುಣಿತ, ಛದ್ಮವೇಶ, ಜಾಥಾ ಕಾರ್ಯಕ್ರಮಕ್ಕೆ ಹೆಚ್ಚುವರಿ ಮೆರಗನ್ನ ನೀಡಿತ್ತು. ಗಾಂಧಿ ಸ್ಮೃತಿ ಕಾರ್ಯಕ್ರಮ: ಶ್ರೀ ಡಾ. ವೀರಣ್ಣ ಸಿ.ಚರಂತಿ ಮಠ ಮಾಜಿ ಶಾಸಕರು, ಶ್ರೀಮತಿ ರಕ್ಷಿತಾ ಈಟಿ & ಗಣ್ಯರು ಗಾಂಧಿಜೀ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪ ನಮನ ಮಾಡಿದರು. ಪಾನಮುಕ್ತರಿಗೆ ಅಭಿನಂದನೆ: ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಜನ ಜಾಗೃತಿ ಪದಾಧಿಕಾರಿಗಳು ಪಾನಮುಕ್ತರಿಗೆ ಅಭಿನಂದಿಸಿದರು.ಪದಗ್ರಹಣ ಕಾರ್ಯಕ್ರಮ: ಬಾಗಲಕೋಟ ಜಿಲ್ಲಾ ಜನಜಾಗೃತಿ ವೇದಿಕೆಯ ಪದಗ್ರಹಣ ಕಾರ್ಯಕ್ರಮವನ್ನು ಶ್ರೀಮತಿ ರಕ್ಷಿತಾ ಈಟಿ ಹಾಗೂ ಪ್ರಾದೇಶಿಕ ನಿರ್ದೇಶಕರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಶ್ರೀಕಾಂತ್ ಸಂದಿಮನಿ ಪದಗ್ರಹಣ ಮಾಡಿದರು.ಸಾಧಕರಿಗೆ ಸನ್ಮಾನ: ಕುಡಿತ ಬಿಟ್ಟು ವಿಶೇಷ ಸಾಧನೆಗೈದ ಎರಡು ಜನ ಪಾನಮುಕ್ತ ಸದಸ್ಯರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಆಶಯ ಭಾಷಣ : ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್.ಬಿ. ರವರು ಗಾಂಧಿ ಜಯಂತಿ ಕಾರ್ಯಕ್ರಮದ ಕುರಿತಂತೆ ಜನಜಾಗೃತಿ ವೇದಿಕೆಯ ಸಾಧನೆಯ ವಿವರ ನೀಡಿದರು. ಗಣ್ಯರ ಉಪಸ್ಥಿತಿ ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ, ಶ್ರೀ ಗಣೇಶ್ ಬಿ ಪ್ರಾದೇಶಿಕ ನಿರ್ದೇಶಕರು, ಶ್ರೀ ಕೃಷ್ಣ. ಟಿ ನಿರ್ದೇಶಕರು, ಶ್ರೀಮತಿ ರಕ್ಷಿತಾ ಈಟಿ, ಶ್ರೀ ಶ್ರೀಕಾಂತ್ ಸಂದಿಮನಿ, ಡಾಕ್ಟರ್ ಎಂ ಕಿತ್ತಲಿ, ಶ್ರೀ ರವೀಂದ್ರ ಒಂದ ಕುದುರಿ, ಶ್ರೀ ಹನುಮಂತ್ ಸುಕಾಲಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
