ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಗಾಂಧಿಸ್ಮೃತಿ, ಪಾನಮುಕ್ತರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಗಾಂಧಿಸ್ಮೃತಿ, ಪಾನಮುಕ್ತರಿಗೆ ಅಭಿನಂದನೆ ಮತ್ತು ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು.ಬೃಹತ್ ಜನಜಾಗೃತಿ ಜಾಥಾ: ಕೊಪ್ಪಳ ಜಿಲ್ಲೆಯ ಕೊಪ್ಪಳ ಸಿಟಿ ಮದ್ಯಭಾಗದ ಶ್ರೀ ಈಶ್ವರ್ ಪಾರ್ಕ್ ನಿಂದ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ನವಜೀವನ ಸದಸ್ಯರು, ಫಲಾನುಭವಿಗಳು, ಗಣ್ಯರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿರಿದರು. ಡೊಳ್ಳು ಕುಣಿತ, ಎತ್ತಿನ ಚಕ್ಕಡಿ ಛದ್ಮವೇಶ, ಟ್ಯಾಬ್ಲೋ, ಜಾಥಾ ಕಾರ್ಯಕ್ರಮಕ್ಕೆ ಹೆಚ್ಚುವರಿ ಮೆರಗನ್ನ ನೀಡಿತ್ತು. ಗಾಂಧಿಸ್ಮೃತಿ ಕಾರ್ಯಕ್ರಮ: ಶ್ರೀ ರಾಹುಲ್ ರತ್ನo ಪಾಂಡೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು & ಗಣ್ಯರು ಗಾಂಧಿಜೀ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪ ನಮನ ಮಾಡಿದರು. ಹಕ್ಕೋತ್ತಾಯ ಮತ್ತು ಠರಾವು ಮಂಡನೆ: ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ ಜನಜಾಗೃತಿ ಅಧ್ಯಕ್ಷರು ಜಿಲ್ಲಾ ನಿರ್ದೇಶಕರಾದ ಶ್ರೀ ಸದಾನಂದ ಬಂಗೇರ ಜನಜಾಗೃತಿ ಸದಸ್ಯರು ಠರಾವನ್ನು ಮಂಡಿಸಿದರು( ಹಸ್ತಾಂತರಿಸಿದರು) ಪಾನಮುಕ್ತರಿಗೆ ಅಭಿನಂದನೆ: ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಜನಜಾಗೃತಿ ಪದಾಧಿಕಾರಿಗಳು ಪಾನಮುಕ್ತರಿಗೆ ಅಭಿನಂದಿಸಿದರು. ಪದಗ್ರಹಣ ಕಾರ್ಯಕ್ರಮ: ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆಯ ಪದಗ್ರಹಣ ಕಾರ್ಯಕ್ರಮವನ್ನು ಶ್ರೀ ಶಿವರಾಮಕೃಷ್ಣ ನಂದ ಭಾರತಿ ಮಹಾಸ್ವಾಮಿಗಳು ಹಾಗೂ ಪ್ರಾದೇಶಿಕ ನಿರ್ದೇಶಕರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಜನಾರ್ದನ್ ಹುಲಿಗಿ ಉಪಾಧ್ಯಕ್ಷರಾಗಿ ಶ್ರೀ ಸಂಗಣ್ಣ ತೆಂಗಿನಕಾಯಿ ಪದಗ್ರಹಣ ಮಾಡಿದರು. ಸಾಧಕರಿಗೆ ಸನ್ಮಾನ ಕುಡಿತ ಬಿಟ್ಟು ವಿಶೇಷ ಸಾಧನೆಗೈದ ಎರಡು ಜನ ಪಾನ ಮುಕ್ತ ಸದಸ್ಯರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಯೋಜನೆಯ ಸೌಲಭ್ಯಗಳ ವಿತರಣೆ: ಆಯುಷ್ಮಾನ್ ಕಾರ್ಡ್, ಇ – ಶ್ರಮ್ ಕಾರ್ಡ್, ಸುಜ್ಞಾನ ನಿಧಿ ಶಿಷ್ಯವೇತನ, ದೇವಸ್ಥಾನ ಕಮಿಟಿಯವರಿಗೆ ಡಿಡಿ ಹಸ್ತಾಂತರ, ದಿವ್ಯಾಂಗ ಚೇತನರಿಗೆ ವೀಲ್ ಚೇರ್ ಸೌಲಭ್ಯವನ್ನು ಗಣ್ಯರಿಂದ ವಿತರಣೆ ಮಾಡಿಸಲಾಯಿತು. ಪೂಜ್ಯರಿಂದ ಆಶೀರ್ವಚನ: ಶ್ರೀ ಶಿವರಾಮ ಕೃಷ್ಣನಂದ ಭಾರತಿ ಮಹಾಸ್ವಾಮಿಗಳು, ಶ್ರೀ ಶಂಕರಾಚಾರ್ಯ ಮಠ ಭಾಗ್ಯನಗರ ಕೊಪ್ಪಳ ಆಶೀರ್ವಚನದ ಸಂದೇಶ ನೀಡಿದರು.ಆಶಯ ಭಾಷಣ: ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ್.ಬಿ. ರವರು ಗಾಂಧಿ ಜಯಂತಿ ಕಾರ್ಯಕ್ರಮದ ಕುರಿತಂತೆ ಜನಜಾಗೃತಿ ವೇದಿಕೆಯ ಸಾಧನೆಯ ವಿವರ ನೀಡಿದರು.ಗಣ್ಯರ ಉಪಸ್ಥಿತಿ: ಈ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಶ್ರೀ ಶಿವರಾಮ ಕೃಷ್ಣಾನಂದ ಭಾರತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದು,ಗಣ್ಯರಾದ ಶ್ರೀ ರಾಹುಲ್ ರತ್ನo ಪಾಂಡೆಯ, ಶ್ರೀ ಶ್ರೀನಿವಾಸ್ ಗುಪ್ತ, ಶ್ರೀ ಜನಾರ್ಧನ್ ಹುಲಗಿ, ಶ್ರೀ ಗಣೇಶ್ ಬಿ ಪ್ರಾದೇಶಿಕ ನಿರ್ದೇಶಕರು,ಶ್ರೀ ಸದಾನಂದ ಬಂಗೇರ ನಿರ್ದೇಶಕರು, ಶ್ರೀಮತಿ ಶಿವಗಂಗ ಶಿವ ರೆಡ್ಡಿ ಬೋಮಕ್ಕನವರ ಕೊಪ್ಪಳ ನಗರ ಸಭೆ ಅಧ್ಯಕ್ಷರು, ಶ್ರೀ ಸಂಗಣ್ಣ ತೆಂಗಿನಕಾಯಿ,ಕೊಪ್ಪಳ ಜಿಲ್ಲಾ ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.