ಕೊಪ್ಪಳ ತಾಲೂಕಿನಲ್ಲಿ ನಡೆಯುತ್ತಿರುವ 1776ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬೂದುಗುಂಪದ ಶ್ರೀ ಬೂದೇಶ್ವರ ದೇವಸ್ಥಾನದ ಸಭಾಭವನದಲ್ಲಿ 1776ನೇ ಮಧ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭದ ಕಾರ್ಯಕ್ರಮ ನಡೆಸಲಾಯಿತು.ಕುಟುಂಬ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕರಾದ ಮಾನ್ಯ ಶ್ರೀ ಸದಾನಂದ ಬಂಗೇರ್, ಕೊಪ್ಪಳ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಕರಿಬಸಪ್ಪ ಕುದುರಿಮೂತಿ, ಶ್ರೀ ಗುರುಬಸಯ್ಯ ಹಿರೇಮಠ ರವರು ದೀಪ ಪ್ರಜ್ಜಲನೆ ಮೂಲಕ ಚಾಲನೆ ನೀಡಿದರು. ಕೊಪ್ಪಳ ಜಿಲ್ಲೆಯ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ್ ಶೆಟ್ಟಿ ರವರು 76 ಜನ ಶಿಬಿರಾರ್ಥಿಗಳಿಗೆ ಮನೆ – ಮನ ಬೆಳಗಲೆಂದು ದೀಪವನ್ನು ಕಾಣಿಕೆಯಾಗಿ ನೀಡಿದರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಜನಾರ್ದನ್ ಹುಲಿಗಿ ರವರು ಶಿಬಿರಾರ್ಥಿಗಳಿಗೆ ಅದ್ಭುತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಶರಣಪ್ಪ ದಾನದ ಕೈ, ಶ್ರೀ ಮಲ್ಲಿಕಾರ್ಜುನ್ ಕುಮುಟದ್, ಶ್ರೀ ನಾರಾಯಣ್ ಶೆಟ್ಟಿ ಹಿರಿಯ ಮುಖಂಡರು ನಾಗೇಶನಹಳ್ಳಿ, ಶ್ರೀ ಬೂದೇಶ್ವರ ದೇವಸ್ಥಾನದ ಅರ್ಚಕರು, ಶ್ರೀ ರಘುರಾಮ್ ಕ್ಷೇತ್ರ ಯೋಜನಾಧಿಕಾರಿ ಶ್ರೀ ನಾಗೇಶ್ ವೈ. ಜನಜಾಗೃತಿ ಯೋಜನಾಧಿಕಾರಿ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು, ಈ ಶಿಬಿರದಿಂದ 76 ಶಿಬಿರಾರ್ಥಿಗಳು ವ್ಯಸನ ಮುಕ್ತರಾಗಿ ಜೀವನ ನಡೆಸಲು ಸಂಕಲ್ಪದ ಪಣತೊಟ್ಟರು.