ನಾಲ್ಕು ಜನರ ಮಧ್ಯದಲ್ಲಿ ಇದ್ದು ಸಮಾಜದಲ್ಲಿ ಗೌರವವನ್ನು ಸಂಪಾದಿಸಬೇಕಾದರೆ ಮದ್ಯವನ್ನು ಬಿಡಲೇಬೇಕು ಎಂದು ಕುದರಿಮೋತಿಯ ವಿಜಯ ಮಹಾಂತೇಶ್ವರ ಸ್ವಾಮಿಗಳು ಹೇಳಿದರು. ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸಮುದಾಯ ಭವನದಲ್ಲಿ 1753ನೇ ಮದ್ಯವರ್ಜನ ಶಿಬಿರದ ಸಾನಿಧ್ಯವಹಿಸಿ ಮಾತನಾಡಿದ ಅವರು ಎಲ್ಲರೂ ಕೆಟ್ಟಚಟಗಳನ್ನು ಅಳವಡಿಸಿಕೊಳ್ಳಲು ಪ್ರೊತ್ಸಾಹಿಸುವರೆ ಹೆಚ್ಚು ಜನರಿದ್ದಾರೆ ಆದರೆ ಧರ್ಮಸ್ಥಳ ಸಂಸ್ಥೆಯವರು ಮದ್ಯದ ಚಟಕ್ಕೆ ಬಲಿಯಾದವರನ್ನು ಬಿಡಿಸಿ ಒಳ್ಳೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕಾರಿ ಆಗುತ್ತಿರುವದನ್ನು ಗಮನಿಸಿದರೆ ಅವರ ಸಾಮಾಜಿಕ ಕಳಕಳಿ ಎಂತಹದ್ದು ಎಂಬುವದನ್ನು ತೋರಿಸುತ್ತದೆ ಎಂದರು. ಕಾರ್ಯಕ್ರಮವನ್ನು ಗಣ್ಯರಾದ ಮಂಜುನಾಥ ಬೇಲಿರಿ ಉದ್ಘಾಟಿಸಿದರು. ಕೊಪ್ಪಳ ಜಿಲ್ಲಾ ಯೋಜನೆಯ ನಿರ್ದೇಶಕರಾದ ಸದಾನಂದ ಬಂಗೇರ, ಜಿ.ಪಂ.ಮಾಜಿ ಸದಸ್ಯ ಸಿ.ಎಚ್.ಪಾಟೀಲ, ಫ್ರೊ.ಎಂ.ಎಸ್.ಹೊಟ್ಟಿನ ಇನ್ನೀತರರು ಮಾತನಾಡಿದರು. ಸುಮಾರು 70 ಜನರು ಮದ್ಯಬಿಡುವಲ್ಲಿ ಪ್ರೇರಿಪಿತರಾಗಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ತಳವಾರ ಅಧ್ಯಕ್ಷತೆ ವಹಿಸಿದ್ದರು ಜಿಲ್ಲಾ ಜನಜಾಗ್ರತಿ ಸಮಿತಿ ಸದಸ್ಯರಾದ ಶಕುಂತಲಾ ಪಾಟೀಲ, ಶರಣ ಬಸಪ್ಪ, ದಾನಕೈ ವೀರಣ್ಣ ನಿಂಗೋಜಿ,ಗುರಪ್ ಗುರಿಕಾರ, ಹನುಮಂತಪ್ಪ ಬೇರಗಿ ಶಿವಪುತ್ರಪ್ಪ ಮಲಿಗೋಡದ, ಶರಣಪ್ಪ ಗಾಣಗೇರ, ರಾಯಪ್ಪ ಮಾಡಲಗೇರಿ, ತಿಪ್ಪಣ್ಣ, ಶಿವರಾಯಪ್ಪ, ಮರಿತಿಮ್ಮಪ್ಪ, ಮಹಾಂತೇಶ ಗಾಣಗೇರ ಯೋಜನಾಧಿಕಾರಿ ಟಿ.ಸತೀಶ ಖಾಜಾಮೈನುದ್ಧಿನ ಅಮರಾವತಿ ಕಲ್ಲನಗೌಡ ಪಾಟೀಲ ಇನ್ನೀತರರು ಉಪಸ್ಥಿತರಿದ್ದರು.