ಕೊಪ್ಪಳ ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ತರಬೇತಿದಾರರಿಗೆ ತರಬೇತಿ ಕಾರ್ಯಕ್ರಮ ಹಾಗೂ ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ

Janajagurthi Vedike News

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಶ್ರೀ ಬಾಲಾಜಿ ಫಂಕ್ಷನ್ ಸಭಾಂಗಣದಲಿ ಕೊಪ್ಪಳ ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ತರಬೇತಿದಾರರಿಗೆ ತರಬೇತಿ ಕಾರ್ಯಕ್ರಮವನ್ನು ಹಾಗೂ ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ ನಡೆಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ರವರು ಮಾರ್ಗದರ್ಶನ ನೀಡುತ್ತಾ ದುಶ್ಚಟ ಮುಕ್ತ ಸಮಾಜ ನಿರ್ಮಾಣವು ಪೂಜ್ಯರ ಕನಸಾಗಿದ್ದು ಈ ನಿಟ್ಟಿನಲ್ಲಿ ಜನಜಾಗೃತಿ ವೇದಿಕೆ ಪ್ರಾರಂಭ ಮಾಡಲಾಯಿತು. ಜನಜಾಗ್ರತಿ ವೇದಿಕೆ ಮೂಲಕ ಮಧ್ಯವವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಗ್ರಾಮ ಸುಭಿಕ್ಷಾ ಕಾರ್ಯಕ್ರಮ, ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳು, ಶಾಲಾ ಕಾಲೇಜು ಮಕ್ಕಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಗ್ಗೆ ಮಾರ್ಗದರ್ಶನ ನೀಡುತ್ತಾ ವಿದ್ಯಾರ್ಥಿ ಜೀವನದ ಗುರಿ ಉದ್ದೇಶ ಹಾಗೂ ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪುವ ಕಾರಣಗಳು, ಘಟನಾವಳಿಗಳು, ಮಾದಕ ವಸ್ತುಗಳು ಇಂದು ವಿದ್ಯಾರ್ಥಿಗಳ ಕೈಗೆ ನಿಲುಕುತ್ತಿವೆ. ಯುವಜನತೆ ಇದರ ದಾಸರಾಗಿ ಹಾದಿ ತಪ್ಪುತ್ತಿದ್ದಾರೆ ವಿದ್ಯಾರ್ಥಿಗಳು ಬಹಳ ಅಪಾಯದಲ್ಲಿದ್ದಾರೆ, ಸಾಕಷ್ಟು ವರದಿ ವಿಶ್ಲೇಷಣೆ ಮತ್ತು ಚಿಕಿತ್ಸಾ ಕೇಂದ್ರಗಳ ಪ್ರಕಾರ ಮಾದಕ ವಸ್ತುಗಳ ಸೇವನೆಗೆ 14 ರಿಂದ 21ರ ವಯೋಮಾನದವರು ಹೆಚ್ಚು ಆಕರ್ಷಿತರಾಗುತ್ತಾರೆ, ಹಾಗಾಗಿ ಈ ವಯೋಮಾನವನ್ನು ರಿಸ್ಕ್ ಏಜ್ ಎನ್ನಬಹುದು, ಭಯೋತ್ಪಾದನೆ , ನಕ್ಸಲಿಸಂ, ಆತ್ಮಹತ್ಯಾದಳ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿರುವವರು ಇದೇ ವಯಸ್ಸಿನವರವೆಂಬುದು ಉಲ್ಲೇಖನಿಯವಾಗಿದೆ. ಶೇ.13.8 ವಿದ್ಯಾರ್ಥಿಗಳು ಮದ್ಯಪಾನಕ್ಕೆ ಶೇ.10.2 ಮಾದಕ ವಸ್ತುಗಳಿಗೆ ಈ ವಯಸ್ಸಿನಲ್ಲಿ ಬಳಿ ಬೀಳುತ್ತಾರೆ ಎಂದು ಸಮೀಕ್ಷೆಯಿಂದ ಖಾತರಿಯಾಗಿದೆ ಎಂದು ತಿಳಿಸಿದರು. ಈ ಒಂದು ತರಬೇತಿ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಜನಾರ್ದನ್ ಹುಲಿಗಿ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಗುಪ್ತಾ, ಶ್ರೀ ಸದಾನಂದ ಬಂಗೇರ್, ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ ಆಯ್ದ ಶಿಕ್ಷಕರು, ಸಾಹಿತಿಗಳು,ವೈದ್ಯರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಮಾರ್ಗದರ್ಶನ ಪಡೆದುಕೊಂಡರು. ಜನಜಾಗೃತಿ ಹಾಗೂ ಕೊಪ್ಪಳ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.