ಕೊಡಗು ಜಿಲ್ಲೆ,ವಿರಾಜಪೇಟೆ ಮಡಿಕೇರಿ ತಾಲ್ಲೂಕು, ಜನಜಾಗೃತಿ ಕಾರ್ಯಕ್ರಮವು ದೇಶ ಮತ್ತು ರಾಜ್ಯದ ಶ್ರೇಷ್ಠ ಕಾರ್ಯಕ್ರಮ:-ಶ್ರೀ ಶ್ರೀ ಶ್ರೀ ತತ್ವರೂಪಾನಂದ ಸ್ವಾಮಿಜಿ ಶ್ರೀ ರಾಮಕೃಷ್ಣ ಆಶ್ರಮ ಪೊನ್ನಂಪೇಟೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಕೊಡಗು ಜಿಲ್ಲೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಮಡಿಕೇರಿ,ವಿರಾಜಪೇಟೆ ತಾಲ್ಲೂಕು ಇದರ ಸಹಯೋಗದೊಂದಿಗೆ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ 153ನೇ ಗಾಂಧಿ ಜಯಂತಿಯ ಸಂಭ್ರಮಾಚರಣೆಯ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ದುಶ್ಚಟಗಳ ವಿರುದ್ಧ ಜನಜಾಗೃತಿ ಸಮಾವೇಶ ಕಾರ್ಯಕ್ರಮವು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಸಭಾಭವನದಲ್ಲಿ ನಡೆಯಿತು,
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀ ಶ್ರೀ ಶ್ರೀ ತತ್ವರೂಪಾನಂದ ಸ್ವಾಮೀಜಿ ಶ್ರೀ ರಾಮಕೃಷ್ಣ ಆಶ್ರಮ ಪೊನ್ನಂಪೇಟೆ ಇವರು ಜನಜಾಗೃತಿಯ ಶಿಬಿರದದ ಮೂಲಕವಾಗಿ ಅದೆಷ್ಟೊ ಜನರ ಬಾಳಿನಲ್ಲಿ ಹೊಸ ಬದುಕನ್ನು ಕಟ್ಟಿಕೊಂಡು ಜೀವನ ಮಾಡುತ್ತಿರುವುದನ್ನು ಕಣ್ಣಲ್ಲಿ ಕಂಡಾಗ ಇದಕ್ಕಿಂತ ಶ್ರೇಷ್ಠವಾದ ಕಾರ್ಯಕ್ರಮ ಈ ಜಗತ್ತಿನಲ್ಲಿಯೇ ಇಲ್ಲ ಎಂಬುದು ನಿಜವಾಗುತ್ತದೆ ಇದು ನಿಜವಾಗಿಯೂ ದೇವರು ಮೆಚ್ಚುವ ಕಾರ್ಯಕ್ರಮ ಎಂದರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಲೀಲಾವತಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಕೊಡಗು ಜಿಲ್ಲೆ ಇವರು ಮದ್ಯ ಎನ್ನುವುದು ಆತ್ಮ ಮತ್ತು ದೇಹ ಎರಡನ್ನೂ ಸುಡುತ್ತದೆ,ವ್ಯಕ್ತಿಯಲ್ಲಿ ಮನ-ಪರಿವರ್ತನೆಯನ್ನು ಮಾಡಿ ಮನೆ ಮನೆಯಲ್ಲಿಯೂ ಮದ್ಯಸೇವನೆಯನ್ನು ನಿಷೇಧಿಸಿದಾಗ ಗಾಂಧಿ ಕಂಡ ರಾಮ ರಾಜ್ಯದ ಕನಸು ನನಸಾಗುತ್ತದೆ,ಹಬ್ಬ ಹರಿದಿನದ ಸಮಯದಲ್ಲಿ ಮದ್ಯಪಾನದಿಂದ ದೂರ ಇದ್ದು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು, ಶ್ರೀ ಕೋಳೆರ ದಯಾಚಂಗಪ್ಪ ತಾಲ್ಲೂಕು ಸದಸ್ಯರು,ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಶ್ರೀ ಅರುಣ್ ಬಾನಂಗಡ ಉಪಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡರು, ಪೊನ್ನಂಪೇಟೆಯ ಗಾಂಧಿ ವೃತ್ತದಿಂದ ಶ್ರೀ ರಾಮಕೃಷ್ಣ ಆಶ್ರಮ ಪೊನ್ನಂಪೇಟೆಯವರೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಗಣೇಶ್,ಪ್ರಕಾಶ್ ಸುನಿತಾರವರು ಅನಿಸಿಕೆಯನ್ನು ವ್ಯಕ್ತಪಡಿಸಿದರು ಗಿರೀಶ್ ರವರು ಪ್ರಾರ್ಥಿಸಿದರು ,ವಿರಾಜಪೇಟೆ,ಮಡಿಕೇರಿ ತಾಲ್ಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ಬಿ ಅವರು ಸ್ವಾಗತಿಸಿದರು, ಪೊನ್ನಂಪೇಟೆ ವಲಯ ಮೇಲ್ವಿಚಾರಕರಾದ ಶ್ರೀನಿವಾಸಮೂರ್ತಿಯವರು ಧನ್ಯವಾದಗೈದರು, ತಾಲ್ಲೂಕಿನ ಕೃಷಿ ಮೇಲ್ವಿಚಾರಕರಾದ ರಾಮ್ ಕುಮಾರ್ ರವರು ಧನ್ಯವಾದಗೈದರು.
