ಕೊಪ್ಪಳ ಪ್ರಾದೇಶಿಕ ವಿಭಾಗದ ವಿಜಯನಗರ ಜಿಲ್ಲಾ ವ್ಯಾಪ್ತಿಯ ಕೊಟ್ಟೂರು ಮತ್ತು ಕೂಡ್ಲಿಗಿ ತಾಲ್ಲೂಕಿನ ಸಹಬಾಗಿತ್ವದಲ್ಲಿ ಕೊಟ್ಟೂರಿನ ಬನಶಂಕರಿ ದೇವಸ್ಥಾನದ ಸಮುದಾಯ ಭವನದಲ್ಲಿ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತರ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜನಜಾಗೃತಿ ವೇದಿಕೆ ಕೊಪ್ಪಳ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಶ್ರೀ ನಾಗೇಶ್ ರವರು ನವಜೀವನ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ ಬೆಂಕಿ ದೇಹವನ್ನು ಸುಟ್ಟರೆ ಸಾರಾಯಿ ಆತ್ಮವನ್ನು ಸುಡುತ್ತದೆ ಎಂದು ಮಹಾತ್ಮ ಗಾಂಧೀಜಿ ಯವರು ತಿಳಿಸಿದ್ದಾರೆ ಮಹಾತ್ಮ ಗಾಂಧೀಜಿಯವರು ಕಂಡಂತಹ ದುಶ್ಚಟ ಮುಕ್ತ ಸಮಾಜದ ಕನಸನ್ನು ಇಂದು ನನಸು ಮಾಡುತ್ತಿರುವರು ಪೂಜ್ಯ ವೀರೇಂದ್ರ ಹೆಗ್ಗಡೆ ಯವರು 1992 ರಲ್ಲಿ ಜನಜಾಗೃತಿ ವೇದಿಕೆ ಪ್ರಾರಂಭ ಮಾಡಿ ಇಲ್ಲಿಯವರೆಗೆ 1871 ಮದ್ಯವರ್ಜನ ಶಿಬಿರಗಳನ್ನು ಮಾಡಿ ಸುಮಾರು 136000 ಸದಸ್ಯರನ್ನು ದುಶ್ಚಟದಿಂದ ಹೊರಬರುವಂತೆ ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತೆ, ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ದುಶ್ಚಟಕ್ಕೆ ದಾಸರಾಗುವ ಮೊದಲೇ ಯುವ ಸಮೂಹವನ್ನು ಜಾಗೃತಿಗೊಳಿಸಬೇಕೆಂಬ ಕಾರಣಕ್ಕಾಗಿ ಜನಜಾಗೃತಿ ವೇದಿಕೆ ವತಿಯಿಂದ ಶಾಲಾ-ಕಾಲೇಜುಗಳಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಅರಿವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಜನಜಾಗೃತಿ ವೇದಿಕೆ ಮೂಲಕ ಶೌರ್ಯ ವಿಪತ್ತು ನಿರ್ವಹಣೆ, ಗ್ರಾಮ ಕಲ್ಯಾಣ ಕಾರ್ಯಕ್ರಮ, ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಾವಲಿ ಶ್ರೀ ಶಿವಪ್ಪ ರವರು ಮಾತನಾಡಿ ಮದ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟು ಕುಟುಂಬಕ್ಕೆ ಬೇಕಾದ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು ಎಂದು ಶುಭ ಹಾರೈಸಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಸಿದ್ದಯ್ಯರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಆಗುತ್ತಿರುವ ಕಾರ್ಯಕ್ರಮಗಳಿಂದ ಎಷ್ಟೋ ಕುಟುಂಬಗಳಿಗೆ ಒಳ್ಳೆಯದಾಗಿದೆ ಯಾವತ್ತೂ ನಾವು ಯೋಜನೆಯ ಜೊತೆ ಇರುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ 1841 ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾದ ಮೈದೂರು ಶ್ರೀ ಶಿವಣ್ಣರವರು ಕ್ಷೇತ್ರದ ಮೂಲಕ ಪೂಜ್ಯರು ಸಮಾಜಕ್ಕೆ ಕೊಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನವಜೀವನ ಸಮಿತಿ ಸದಸ್ಯರ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು. ಜನಜಾಗೃತಿ ಸದಸ್ಯರಾದ ಕೂಡ್ಲಿಗಿ ಶ್ರೀ ಸಿದ್ದೇಶ್, ಕೊಟ್ಟೂರಿನ ಶ್ರೀ ಮಲ್ಲಿಕಾರ್ಜುನಪ್ಪ, ಶ್ರೀ ಯೋಗೀಶ್ವರ ದಿನ್ನೆ, ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷರಾದ ಹಾಳ್ಯದ ತೋಟದ ಶ್ರೀ ಶಿವಣ್ಣ ಕಾರ್ಯಕ್ರಮದ ಕುರಿತು ಹರ್ಷವನ್ನು ವ್ಯಕ್ತಪಡಿಸಿ ನವಜೀವನ ಸಮಿತಿಯ ಸದಸ್ಯರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕೂಡ್ಲಿಗಿ ಕ್ಷೇತ್ರ ಯೋಜನಾಧಿಕಾರಿ ಶ್ರೀ ಸಂತೋಷ್, ಕೊಟ್ಟೂರಿನ ಕ್ಷೇತ್ರ ಯೋಜನಾಧಿಕಾರಿ ಶ್ರೀ ನವೀನ್ ಕುಮಾರ್, ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀಮತಿ ಉಮಾದೇವಿ, ಜನಜಾಗೃತಿ ಸದಸ್ಯರಾದ ಶ್ರೀ ಗುಂಡಪ್ಪ, ಯೋಜನೆಯ ಮೇಲ್ವಿಚಾರಕ ಹಂತದ ಸಿಬ್ಬಂದಿಗಳಾದ ಶ್ರೀ ರುದ್ರೇಶ್, ಶ್ರೀ ಮಾಂತೇಶ್, ಶ್ರೀ ಜಗದೀಶ್, ಸೌಮ್ಯ, ಶ್ರೀ ವೀರೇಶ್, ಕಚೇರಿ ಸಿಬ್ಬಂದಿ ಶ್ರೀ ಶಶಿಕುಮಾರ್, ಸೇವಾ ಪ್ರತಿನಿಧಿಗಳು, ನವಜೀವನ ಸಮಿತಿ ಸದಸ್ಯರು ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.