ಬೆಂಗಳೂರು ಪ್ರಾದೇಶಿಕ ವಿಭಾಗದ ಕೋಲಾರ ಜಿಲ್ಲೆಯ ಕೆ. ಜಿ. ಎಫ್ ಯೋಜನಾ ಕಛೇರಿ ವ್ಯಾಪ್ತಿಯ ಕ್ಯಾಸಂಬಳ್ಳಿ ವಲಯದ ಕೆ. ವಿ. ಆರ್ ಕಲ್ಯಾಣ ಮಂಟಪದಲ್ಲಿ ನಡೆದ 1837 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಶೀನಪ್ಪ ಎಂ. ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಪೂಜ್ಯರ ಪ್ರೀತಿಯ ಕಾರ್ಯಕ್ರಮವೇ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ. ಶಿಬಿರಕ್ಕೆ ಸೇರಿ ಪಾನಮುಕ್ತ ಜೀವನವನ್ನು ನಡೆಸುವ ಮೂಲಕ ಪೂಜ್ಯರ ಪ್ರೀತಿಗೆ ಪಾತ್ರವಾಗಬೇಕೆಂದು ತಿಳಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸುವುದೇ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯದಲ್ಲಿ 1837 ಮದ್ಯವರ್ಜನ ಶಿಬಿರಗಳ ಮೂಲಕ ರಾಜ್ಯಾದ್ಯಂತ ಸುಮಾರು 150000 ಕ್ಕೂ ಹೆಚ್ಚಿನ ಜನರು ಪಾನಮುಕ್ತ ಜೀವನವನ್ನು ನಡೆಸುತ್ತಾ ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯ ಜೀವನವನ್ನು ನಡೆಸಲು ಮದ್ಯವರ್ಜನ ಶಿಬಿರಗಳ ಮೂಲಕ ಪೂಜ್ಯರು ಆಶೀರ್ವಾದವನ್ನು ಮಾಡಿದ್ದಾರೆ ಎಂದು ತಿಳಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಯೋಜನೆ ಮಾಡದ ಕೆಲಸವಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನಜಾಗೃತಿ ವೇದಿಕೆಯ ಕಾರ್ಯಕ್ರಮವಾದಂತಹ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ದಡಿಯಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಮಾರು 35ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದು ಈ 35 ಕಾರ್ಯಕ್ರಮಗಳಿಗಿಂತ ಹೆಚ್ಚಿನ ಪುಣ್ಯದ ಕೆಲಸವನ್ನು ಜನಜಾಗೃತಿ ವೇದಿಕೆಯ ಕಾರ್ಯಕ್ರಗಳ ಮೂಲಕ ಅನುಷ್ಠಾನವನ್ನು ಮಾಡಲಾಗಿದೆ ಎಂದು ವತ್ಸಲ್ಯಮಯಿ ಹೇಮಾವತಿ ಅಮ್ಮನವರೇ ಹೇಳಿದ್ದಾರೆಂದು ಅಮ್ಮನವರ ಮಾತನ್ನು ಸ್ಮರಿಸಿದರು. ರಾಜ್ಯಾದ್ಯಂತ ಸುಮಾರು 600000 ಸ್ವಸಹಾಯ ಸಂಘಗಳ ಮಾಲಕ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಪೂಜ್ಯರು ಮತ್ತು ಮಾತೃಶ್ರೀ ಅಮ್ಮನವರ ದೂರದೃಷ್ಠಿಯ ಚಿಂತನೆಗಳೇ ಕಾರಣವೆಂದು ತಿಳಿಸಿದರು. “ಸಪ್ತವ್ಯಸನಗಳಲ್ಲಿ ಮದ್ಯಪಾನ ಮೊದಲಮೆಟ್ಟಿಲು ಅದನ್ನು ಜಾರಿದರೆ ಎಲ್ಲವನ್ನು ಜಾರಿದಂತೆ” ಎಂಬ ಪೂಜ್ಯರ ನಾನ್ನುಡಿಯನ್ನು ಉಚ್ಚರಿಸುವ ಮೂಲಕ ಪೂಜ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದಾರ್ಮಿಕ ಕ್ಷೇತ್ರಗಳಿಗೆ, ಹೈನುಗಾರಿಕೆ, ಸುಜ್ಞಾನನಿದಿ, ಜ್ಞಾನವಿಕಾಸ ಕಾರ್ಯಕ್ರಮ, ಕೆರೆ ಹೂಳೆತ್ತುವ ಕಾರ್ಯಗಳಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದಲ್ಲದೆ ಜನಜಾಗೃತಿ ವೇದಿಕೆ ಕಾರ್ಯಕ್ರಮಗಳಿಂದ ಗಾಂಧೀಜಿಯವಯರು ಕಂಡಂತಹ ರಾಮ ರಾಜ್ಯದ ಕನಸನ್ನು ಹೆಗ್ಗಡೆ ದಂಪತಿಗಳು ನನಸನ್ನು ಮಾಡಿದ್ದಾರೆಂದು ತಿಳಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.
