ಕೆ ಆರ್ ಪೇಟೆ ತಾಲೂಕು ಬೂಕನಕೆರೆ ವಲಯದ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಡಾ.ಶಿವಯೋಗಿ ಮಹಾಂತ ಮಹಾಸ್ವಾಮಿಯವರ ಜನ್ಮ ದಿನದ ಪ್ರಯುಕ್ತ ” ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ”

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ). ಕೆ ಆರ್ ಪೇಟೆ ತಾಲೂಕು ಬೂಕನಕೆರೆ ವಲಯದ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಡಾ.ಶಿವಯೋಗಿ ಮಹಾಂತ ಮಹಾಸ್ವಾಮಿಯವರ ಜನ್ಮ ದಿನದ ಪ್ರಯುಕ್ತ ” ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ಹಮ್ಮಿಕೊಂಡಿದ್ದು ಕಾರ್ಯಕ್ರಮ ವನ್ನು ದೀಪಾ ಬೆಳಗಿಸುವ ಮೂಲಕ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಕೇಶವ ದೇವಾಂಗ ಸರ್ ರವರು ಕ್ಷೇತ್ರದ ಹಿನ್ನೆಲೆ, ಪೂಜ್ಯರ ಸಮಾಜಮುಖಿ ಕಾರ್ಯಕ್ರಮಗಳು, ಹಾಗೂ ದುಶ್ಚಟದಿಂದಾಗುವ ದುಶ್ಪರಿಣಾಮಗಳ ಬಗ್ಗೆ ಮಾತನಾಡುತ್ತಾ ಯುವಶಕ್ತಿ ಬಲಿಷ್ಠ ವಾದ ಶಕ್ತಿಯಾಗಿದ್ದು ಸುಭದ್ರ ರಾಷ್ಟ್ರದ ನಿರ್ಮಾಣ ದಲ್ಲಿ ಯುವಜನರ ಪಾತ್ರವು ಅಪಾರವಾಗಿದೆ. ಯುವ ಜನರು ಕೆಟ್ಟ ಜನರ ಸಹವಾಸದಿಂದ ಆಮಿಷಕ್ಕೆ ಒಳಗಾಗಿ ಕ್ಷಣಿಕ ಸುಖದ ಆಸೆಯಿಂದ ಸಮಾಜಕ್ಕೆ ಕೇಡುಂಟು ಮಾಡುವ ಕೃತ್ಯ ಗಳಿಗೆ ಒಳಗಾಗುತ್ತಿದ್ದಾರೆ. ಮಕ್ಕಳು ತಂದೆ ತಾಯಿ ಗಳಿಗೆ ಹಾಗೂ ಗುರುಹಿರಿಯರಿಗೆ ಹೆಸರು ಮತ್ತು ಕೀರ್ತಿಯನ್ನು ತರುವಂತಹ ವ್ಯಕ್ತಿ ಗಳಾಗಿ ಹೊರಹೋಮ್ಮಬೇಕು ಎಂದು ಎಲ್ಲ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.