ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಉದ್ಘಾಟನಾ ಕಾರ್ಯಕ್ರಮವನ್ನು ಕೂಳೂರು ಚರ್ಚ್ ಪ್ರೌಢಶಾಲೆಯಲ್ಲಿ ನಡೆಸಲಾಯಿತು .ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಅನಿಲ್ ಕುಮಾರ್, ಜನಜಾಗೃತಿ ವೇದಿಕೆಯ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾಗಿರುವ ಮಹಮ್ಮದ್ ಇಸ್ಮಾಯಿಲ್, ತಾಲೂಕು ಜನಜಾಗೃತಿ ವೇದಿಕೆಯ ಸದಾಶಿವ ಶೆಟ್ಟಿ, ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ಶ್ರೀ ಚನ್ನಕೇಶವ ,ಸಂಪನ್ಮೂಲ ವ್ಯಕ್ತಿ ಶಂಕರನಾರಾಯಣ ಮಯ್ಯದ್ ಪಾಡಿ, ಶಾಲೆಯ ಮುಖ್ಯ ಶಿಕ್ಷಕರಾಗಿರುವ ರಮೇಶ್ ಭಟ್, ವಲಯ ಅಧ್ಯಕ್ಷರಾಗಿರುವ ಹರೀಶ್ ಶೆಟ್ಟಿ, ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
