ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ಪದಗ್ರಹಣ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಧ್ಯಕ್ಷತೆ ಯನ್ನು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶುಭಾಷ್ ಚಂದ್ರ ಚೌಟ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆ ಯನ್ನು ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಹಿರಿಯರಾದ ಮಹಾವೀರ್ ಜೈನ್ ನೆರವೇರಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಶುಭಶ್ಚಂದ್ರ ಚೌಟ ರವರು ನೂತನ ಅಧ್ಯಕ್ಷರಾದ ಉದಯ್ ಹೆಗ್ಡೆ ಯವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಶಿವರಾಯ ಪ್ರಭು, ಜನಜಾಗ್ರತಿ ವೇದಿಕೆಯ ಹಿರಿಯ ಸದಸ್ಯರಾದ ಕಮಲಾಕ್ಷ ನಾಯಕ್. ಜನ ಜಾಗೃತಿ ವೇದಿಕೆ ಉಪಾಧ್ಯಕ್ಷರಾದ ತ್ರಿ ವಿಕ್ರಂ ಕಿಣಿ, ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗ್ರತಿ ವೇದಿಕೆ ಯೋಜನಾಧಿಕಾರಿಯಾಗಿ ಗಣೇಶ್ ಆಚಾರ್ಯ, ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಹೇಮಲತಾ, ನೂತನ ಪದಾಧಿಕಾರಿಗಳು, ಜನಜಾಗ್ರತಿ ವೇದಿಕೆಯ ಸದಸ್ಯರು, ನವ ಜೀವನ ಸಮಿತಿ ಸದಸ್ಯರು, ತಾಲೂಕಿನ ಮೇಲ್ವಿಚಾರಕರು, ನವ ಜೀವನ ಸಮಿತಿ ಪೋಷಕರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಸೌಮ್ಯ ಶೆಟ್ಟಿ, ಕಾರ್ಯಕ್ರಮವನ್ನು ನಿರೂಪಿಸಿದರು. ಮೇಲ್ವಿಚಾರಕರಾದ ಗೀತ ಹೆಗ್ಡೆಯವರು ವಂದಿಸಿದರು