ಕಾರ್ಕಳ ತಾಲೂಕಿನಲ್ಲಿ 1811ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ, ಕಾರ್ಕಳ ಯೋಜನಾ ಕಛೇರಿ ವ್ಯಾಪ್ತಿಯ ಕಾರ್ಕಳ ವಲಯದ ಶ್ರೀ ಆದಿ ಲಕ್ಷ್ಮೀ ಮಹಾ ಲಕ್ಷ್ಮಿ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನದಲ್ಲಿ 1811ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶ್ರೀ ಕಡಾರಿ ರವೀಂದ್ರ ಪ್ರಭು ಅಧ್ಯಕ್ಷರು ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಾರ್ಕಳ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ಜನಜಾಗೃತಿ ಯೋಜನಾಧಿಕಾರಿಯವರಾದ ಶ್ರೀ ಗಣೇಶ್ ಆಚಾರ್ಯ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉದಯ್ ಕುಮಾರ್ ಹೆಗ್ಡೆ (ಅಧ್ಯಕ್ಷರು,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.)ಕಾರ್ಕಳ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ನಾಗರಾಜ್ ಶೆಟ್ಟಿ ನಿರ್ದೇಶಕರು ಉಡುಪಿ ಜಿಲ್ಲೆ, ಶ್ರೀ ಅಶೋಕ್ ನಾಯಕ್, ಶ್ರೀ ಸಿರಿಯಣ್ಣ ಶೆಟ್ಟಿ, ಶ್ರೀಮತಿ ಸುನೀತ ಪೂಜಾರಿ, ಶ್ರೀ ಸಂತೋಷ ಶೆಟ್ಟಿ, ಶ್ರೀ ತ್ರಿವಿಕ್ರಮ ಕಿಣಿ, ಶ್ರೀ ಮಹಾವೀರ ಜೈನ, ಶ್ರೀ ಕಮಲಾಕ್ಷ ನಾಯಕ್, ಶ್ರೀ ಪ್ರೇಮ್ ಕುಮಾರ್, ಶ್ರೀ ಹರಿಶ್ಚಂದ್ರ ತೆಂಡೂಲ್ಕರ್, ಶ್ರೀ ಅಂಥೋನಿ ಡಿಸೋಜ, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ., ಶಿಬಿರಾದಿಕಾರಿ ಶ್ರೀ ನಾಗೇಂದ್ರ, ಆರೋಗ್ಯ ಸಹಾಯಕಿ ಶ್ರೀಮತಿ ಫಿಲೋಮಿನಾ ಡಿ’ಸೋಜ, ನವಜೀವನ ಸಮಿತಿ ಸದಸ್ಯರು, ಶೌರ್ಯ ಸ್ವಯಂ ಸೇವಕರು, ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು, ತಾಲೂಕಿನ ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.