ವ್ಯಸನಿಗಳ ಮಕ್ಕಳ ಸಪ್ತಾಹದ ಅಂಗವಾಗಿ ಕಾರ್ಕಳದ ಆರ್‌ಎಸ್‌ಬಿ ಸಭಾ ಭವನದಲ್ಲಿ ರಾಜ್ಯಮಟ್ಟದ ಕುಟುಂಬ ಸಾವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎಲ್ ಎಚ್ ಮಂಜುನಾಥ್ ರವರು ಉದ್ಘಾಟಿಸಿ ಉಪಯುಕ್ತ ಮಾಹಿತಿಯನ್ನು ವ್ಯಸನಮುಕ್ತರ ಮಕ್ಕಳಿಗೆ ಸಮುದಾಯಕ್ಕೆ ನೀಡಿದರು. ಡಾ ಎವಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯರಾದ ಪಿ ವಿ ಭಂಡಾರಿ ಡಾ ವಿರೂಪಾಕ್ಷ ದೇವರಮನೆ. ಶ್ರೀಮತಿ ಸೌಜನ್ಯ ಶೆಟ್ಟಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶ್ರೀ ನವೀನ್ ಅಮೀನ್, ಶ್ರೀ ಸುಭಾಷ್ ಚಂದ್ರ ಚೌಟ, ಶ್ರೀ ಹರೀಶ್ ತೆಂಡೂಲ್ಕರ್ ,ಶ್ರೀ ಶಿವರಾ ಯ ಪ್ರಭು, ಶ್ರೀ ಭಾಸ್ಕರ್, ಶ್ರೀ ತಿಮ್ಮಯ್ಯ ನಾಯಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ 400 ಕ್ಕೂ ಮಿಕ್ಕಿದ ನವಜೀವನ ಕುಟುಂಬಸ್ಥರು ಊರವರು ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಂಡದ ರಿಂದ ಬೀದಿ ನಾಟಕ ಪ್ರದರ್ಶನ ಕೊಡಲಾಯಿತು. ಶ್ರೀ ವೆಂಕಟರವರ ಮಣ್ಣಿನ ಕಲಾಕೃತಿಗಳನ್ನು ಅನಾವರಣಗೊಳಿಸಲಾಯಿತು. ಶಾಲಾ ಮಕ್ಕಳಿಗೆ ಜಾಗೃತಿ ತುಂಬುವ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಇಂದಿನಿಂದ 20ರವರೆಗೆ ನಡೆಯಲ್ಪಡುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಕಳ ತಾಲೂಕಿನ ಸುಮಾರು 300 ನವಜೀವನ ಸದಸ್ಯರ ಮನವೇಟಿ ಕಾರ್ಯಕ್ರಮವನ್ನು ಜನಜಾಗತಿ ವೇದಿಕೆಯ ಆರೋಗ್ಯ ಸಹಾಯಕರುಮತ್ತು ಶಿಬಿರ ಅಧಿಕಾರಿಗಳು ನಡೆಸಿಕೊಟ್ಟಿದ್ದರು. ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಕಳ ಜೋಡು ರಸ್ತೆಯಲ್ಲಿರುವ ಆರ್ ಎಸ್ ಪಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಭು ಕಡಾರಿಯವರು ಬ್ಯಾಂಕ್ ಪರವಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸನ್ಮಾನಿಸಿದರು. ವ್ಯಸನ ಮುಕ್ತರಮಕ್ಕಳಿಗೆ ಸುಮಾರು 150 ಮಂದಿಗೆ ವಿವಿಧ ವಿನೋದ ಕಾರ್ಯಕ್ರಮಗಳು ನೃತ್ಯಗಳು ಚಿತ್ರಕಲಾ ಸ್ಪರ್ಧೆಗಳು ವೇಷಭೂಷಣಗಳು ಹೀಗೆ ವಿವಿಧ ರೀತಿಯಲ್ಲಿ ಅವರಿಗೆ ಅವರ ಭಾಗವಹಿಸುವಿಕೆಗೆ ಅವಕಾಶ ನೀಡಲಾಯಿತು ಸ್ಪರ್ಧೆಯಲ್ಲಿ ಭಾಗವಹಿಸಿ ದವರಿಗೆ ಬಹುಮಾನ ವಿತರಣೆ ಮಾಡಲಾಗಿದೆ.
