ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಉಪ ಮಾರುಕಟ್ಟೆಯ ಸಭಾ ಭವನದಲ್ಲಿ 1570 ನೇ ಮದ್ಯವರ್ಜನಾ ಶಿಬಿರದ ಉದ್ಘಾಟನೆ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸಿದ್ದಾಪುರದ ಉಪ ಮಾರುಕಟ್ಟೆಯ ಸಭಾ ಭವನದಲ್ಲಿ 1570 ನೇ ಮದ್ಯವರ್ಜನಾ ಶಿಬಿರದ ಉದ್ಘಾಟನೆಯನ್ನು ಶ್ರೀಯುತ ವಿಶ್ವನಾಥ ರೆಡ್ಡಿ ಹೊಸಮನಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕೊಪ್ಪಳ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ನೀರಗಂಟಿ ವಹಿಸಿದ್ದರು. ಕೊಪ್ಪಳ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿಗಳಾದ ಶ್ರೀ ಮಾಧವ ನಾಯಕ್ ಸರ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಪೂಜ್ಯರ ಕನಸಿನ ಮದ್ಯವರ್ಜನಾ ಶಿಬಿರದ ಅನುಷ್ಠಾನ,ಜನಜಾಗೃತಿ ವೇದಿಕೆಯ ಸ್ಥಾಪನೆ ಹಾಗೂ ವೇದಿಕೆ ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲೆಯ ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ನಿರ್ದೇಶಕರಾದ ಸದಾನಂದ ಬಂಗೇರ್ ಸರ್, ಶರಣಪ್ಪ ಬಾವಿ ಎಪಿಎಂಸಿ ಮಾಜಿ ಅಧ್ಯಕ್ಷರು ಕಾರಟಗಿ, ಆದಿಲ್ ಪಾಷಾ ಗ್ರಾ. ಪಂ. ಅಧ್ಯಕ್ಷರು ಮುಷ್ಟೂರು, ಕಾಂತಪ್ಪ ಎಂ. ಕೆ. ಕ್ಷೇತ್ರ ಯೋಜನಾಧಿಕಾರಿಗಳು ಕಾರಟಗಿ, ಶಿಬಿರಾಧಿಕಾರಿಗಳಾದ ಶ್ರೀ ದಿವಾಕರ್ ಪೂಜಾರಿ ಸರ್, ಆರೋಗ್ಯ ಸಹಾಯಕಿ ಶ್ರೀಮತಿ ಸೌಮ್ಯ ಹಾಗೂ ಯೋಜನಾ ವ್ಯಾಪ್ತಿಯ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಸ್ವಸಹಾಯ ಸಂಘದ ಫಲಾನುಭವಿಗಳು ಹಾಜರಿದ್ದರು.