ಕಳಸ ತಾಲೂಕಿನಲ್ಲಿ 1808 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಶ್ರೀ ಮಹಾವೀರ ಭವನದಲ್ಲಿ 1808 ನೇ ಮದ್ಯವರ್ಜನ ಶಿಬಿರವು ಶ್ರೀ ಕಲಶೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಟಿ. ವಿ. ವೆಂಕಟಸುಬ್ಬಯ್ಯ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ಸಿ. ಧರನೇಂದ್ರ ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಜಿಲ್ಲಾ ಯೋಜನಾ ನಿರ್ದೇಶಕರಾದ ಶ್ರೀ ಸದಾನಂದ ಬಂಗೇರ, ಕಳಸ ಅನ್ನಪೂರ್ಣೇಶ್ವರಿ ಮೋಟರ್ಸ್ ಮಾಲೀಕರಾದ ಶ್ರೀ ಕೆ. ಕೆ. ಬಾಲಕೃಷ್ಣ ಭಟ್, ಕಳಸ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯರಾದ ಶ್ರೀ ಬ್ರಹ್ಮದೇವ, ಶ್ರೀ ಕೀರ್ತಿ ಜೈನ್, ಶ್ರೀ ಮುರಳಿಧರ ಭಟ್, ಶ್ರೀ ಸುಜಯ ಸದಾನಂದ ಉಪಸ್ಥಿತರಿದ್ದು ಶುಭ ಹಾರೈಸಿದರು.