ಕಳಸ ತಾಲೂಕಿನಲ್ಲಿ 1808 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ

Janajagurthi Vedike News

ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಕಳಸ ತಾಲೂಕಿನಲ್ಲಿ ನಡೆದ 1808 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕುಟುಂಬ ದಿನ ಕಾರ್ಯಕ್ರಮವನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರು ನೆರವೇರಿಸಿದರು ಮತ್ತು ಮಾಹಿತಿ ಮಾರ್ಗದರ್ಶನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಡಾ. ಜಿ. ಬಿಮೇಶ್ವರ ಜೋಶಿ, ಶ್ರೀಮತಿ ರಾಜಲಕ್ಷ್ಮಿ ಧರ್ಮಕರ್ತರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡು, ರೆ. ಫಾ. ಆಗ್ನೆಸ್ ಫೆರ್ನಾಂಡಿಸ್ ಜಗದಿಶ್ವರ ಕ್ರೈಸ್ತಲಯ ಕಳಸ, ಶ್ರೀಮತಿ ಗೀತಾ ಪ್ರಾದೇಶಿಕ ನಿರ್ದೇಶಕರು, ಬ್ರಹ್ಮದೇವ ಸರ್ವೋದಯ ಜೈನತೀರ್ಥ ಸಮಿತಿ ಕಳಸ, ಶ್ರೀ ಪ್ರಶಾಂತ್ ಚಿಪ್ರಾಗುತ್ತಿ, ಶ್ರೀ ಕಿರಣ್ ಶೆಟ್ಟಿ ಜಿಲ್ಲಾ ನಿರ್ದೇಶಕರು, ಯೋಜನಾಧಿಕಾರಿಗಳು, ಒಕ್ಕೂಟದ ಅದ್ಯಕ್ಷರು, ಶೌರ್ಯ ಸ್ವಯಂ ಸೇವಕರು, ನವಜೀವನ ಸದಸ್ಯರು ಉಪಸ್ಥಿತರಿದ್ದರು.