ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಗಂಗಾನಗರ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸಭಾಭವನದಲ್ಲಿ 1600 ನೇ ಮಧ್ಯವರ್ಜನ ಶಿಬಿರದ ಸಮಾರಂಭ ಸಮಾರಂಭ ನಡೆಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮಾತೆ ಮಾಣಿಕೇಶ್ವರಿ ಆಶ್ರಮದ. ಶ್ರೀ ಮಾತೆ ನಂದಿಕೇಶ್ವರಿ ವಹಿಸಿದ್ದು ಉದ್ಘಾಟನೆಯನ್ನು ಕಲ್ಬುರ್ಗಿ ಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಮಾಡಿದ್ದು ನವ ಜೀವನ ಸಮಿತಿ ದಾಖಲಾತಿ ಹಸ್ತಾಂತರವನ್ನು ಜನ ಜಾಗೃತಿ ವೇದಿಕೆ ರಾಜ್ಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರಾಜಣ್ಣ ಕೊರವಿ ಮಾಡಿರುತ್ತಾರೆ. ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯಂತ್ ಪೂಜಾರಿ , ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥರಾದ ಅರವಿಂದ ಹೆಗಡೆ, ಕಲಬುರ್ಗಿ ಮಹಾನಗರ ಪಾಲಿಕೆ ಸದಸ್ಯರಾದ ಗುರುರಾಜ್ ಎಸ್ ಪಟ್ಟಣ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಮೇಶ್ ಅವರು ಉಪಸ್ತಿತರಿದ್ದು ಶುಭ ಹಾರೈಸಿರುತ್ತಾರೆ.
