ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾ,ಡಿ.ವೀರೇಂದ್ರ ಹೆಗ್ಗಡೆ ಅವರು ಮಾಡದ ಸಮಾಜಮುಖಿ ಕಾರ್ಯಗಲಿಲ್ಲ, ಶಾಸಕ ಕಟಕದೊಂಡ ಅಭಿಮತ,,

Janajagurthi Vedike Uncategorized

ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು,ಧರ್ಮದ ದೊರೆಗಳಾದ ಪೂಜ್ಯ ಶ್ರೀ ಡಾ,ಡಿ,ವೀರೇಂದ್ರ ಹೆಗ್ಗಡೆ ಅವರು ಮಾಡದ ಸಮಾಜಮುಖಿ ಕಾರ್ಯಗಲಿಲ್ಲ ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಮತಕ್ಷೇತ್ರದ ಶಾಸಕರಾದ ಶ್ರೀಯುತ ವಿಠ್ಠಲ ಕಟಕದೊಂಡ ಹೇಳಿದರು,ಅವರು ಪುಣ್ಯಕ್ಷೇತ್ರ ಶ್ರೀಧರ್ಮಸ್ಥಳದ ವತಿಯಿಂದ ವಿಜಯಪುರ ನಗರದಲ್ಲಿ ದಿನಾಂಕ16/7/2025 ರಿಂದ 23/7/2025 ರ ವರೆಗೆ ಜರುಗಿದ 1953 ನೇಯ
ಮದ್ಯವರ್ಜನ ಶಿಬಿರದ ಸಮಾರೂಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು,ಪೂಜ್ಯ ಖಾವಂದರು ಕರ್ನಾಟಕ ರಾಜ್ಯಾಧ್ಯಂತ ನಡೆಸುತ್ತಿರುವ ಮದ್ಯವರ್ಜನ ಶಿಬಿರದ ಮುಖಾಂತರ ಲಕ್ಷಾಂತರ ಜನರು ಪಾನಮುಕ್ತರಾಗಿ ತಮ್ಮ-ತಮ್ಮ ಕುಟುಂಬಗಳಲ್ಲಿ ಸುಖವಾಗಿ ಬದುಕುತಿದ್ದಾರೆ,ಪರಮ ಪೂಜ್ಯರು ಈ ಸಮಾಜದಲ್ಲಿ ಮಾಡುವ ಪ್ರತಿಯೊಂದು ಕಾರ್ಯಗಳು ನೊಂದವರ ಕಣ್ಣೀರಣ್ಣು ಒರೆಸುವ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು,
ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು,ಅಖಿಲಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ನಟರಾಜ್ ಬಾದಾಮಿ,ಜಿಲ್ಲಾಧ್ಯಕ್ಷ ಅಪ್ಪುಗೌಡ ಪಾಟೀಲ,ಕಾರ್ಯಕ್ರಮದ ಸ್ವಾಗತ ಸಮೀತಿ ಅಧ್ಯಕ್ಷ ಶಿವಾನಂದ ದೇಸಾಯಿ,ಯೋಜನಾ ನಿರ್ದೇಶಕರಾದ ಸಂತೋಷ ಪೂಜಾರಿ,ಕಾರ್ಯಕ್ರಮದ ಆಯೋಜಕರು, ಮುಖಂಡರಾದ ಮಹೇಶ್ ಮತ್ತು ಸಂಗಪ್ಪ ಸರ್,ಕಲ್ಬುರ್ಗಿ ಪ್ರಾದೇಶಿಕ ವಿಭಾಗದ ಯೋಜನಾ ನಿರ್ದೇಶಕರಾದ ರಾಜೇಶ್ ಕೆ,ಸಿಬ್ಬಂದಿಯವರಾದ ಮಲ್ಲೇಶಪ್ಪ,ಶಿಬಿರಾಧಿಕಾರಿ ದಿನೇಶ ಮರಾಠಿ,ಅರೋಗ್ಯ ಸಹಾಯಕಿ ಜಯಲಕ್ಷ್ಮಿ ಮೇಡಂ, ಸೇರಿದಂತೆ ಶ್ರೀಕ್ಷೇತ್ರದ ವಿವಿಧ ಘಟಕಗಳ ಸಿಬ್ಬಂದಿಗಳು ಮತ್ತು ಬಬಲೇಶ್ವರ ಸೇರಿದಂತೆ ವಿವಿಧ ವಲಯಗಳ ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.