ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗ ವಲಯದ ಯಳಸಂಗಿ ಕಾರ್ಯಕ್ಷೇತ್ರದಲ್ಲಿ ಪಾನಮುಕ್ತ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಆಳಂದ ತಾಲೂಕು, ಪರಮ ಪೂಜ್ಯ ಪದ್ಮ ವಿಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ| ಹೇಮಾವತಿ ಅಮ್ಮನವರ ಕೃಪಾಶೀರ್ವಾದಗಳೊಂದಿಗೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗ ವಲಯದ ಯಳಸಂಗಿ ಕಾರ್ಯಕ್ಷೇತ್ರದಲ್ಲಿ ಪಾನಮುಕ್ತ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಪರಮಪೂಜ್ಯ ಪರಮಾನಂದ ಮಹಾಸ್ವಾಮಿಗಳು ಸಿದ್ದಾರೂಢ ಮಠ ಯಳಸಂಗಿ, ಅಧ್ಯಕ್ಷತೆ ಶ್ರೀ ಭೀಮಣ್ಣ ಶಿವಪೂರಿ ಯಳಸಂಗಿ ಗ್ರಾಮದ ಗಣ್ಯರು. ಶ್ರೀ ಸತೀಶ್ ಸುವರ್ಣ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಕಲಬುರ್ಗಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.ಮುಖ್ಯ ಅತಿಥಿಗಳು ಶ್ರೀ ನಿಂಗಣ್ಣ ಕಂಬಾರ್ ಅಧ್ಯಕ್ಷರು ಶ್ರೀ ಶಂಕರಲಿಂಗ ವಿದ್ಯಾವರ್ಧಕ ಸಂಘ ಮಾಡಿ, ಶ್ರೀ ರಾಜೇಶ್ ಕೆ ಯೋಜನಾಧಿಕಾರಿ ಜನಜಾಗೃತಿ ವಿಭಾಗ ಪ್ರಾದೇಶಿಕ ಕಚೇರಿ ಕಲಬುರ್ಗಿ, ಶ್ರೀಮತಿ ಗೀತಾ ವಿಜಯಕುಮಾರ್ ಹತ್ತರಕ್ಕೆ ವಕೀಲರು ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಕಲಬುರ್ಗಿ, ಶ್ರೀ ಮಲ್ಲಿಕಾರ್ಜುನ್ ಮೈಂದರ್ಗಿ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಕಲಬುರ್ಗಿ, ಶ್ರೀ ರಾಜಕುಮಾರ ಶಟಗಾರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ಕಲಬುರ್ಗಿ, ಶ್ರೀ ಕೃಷ್ಣಪ್ಪ ಬೆಳವಣಿಕಿ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಳಂದ ತಾಲೂಕು, ಶ್ರೀ ಮಲ್ಲೇಶಪ್ಪ ಕುಡಿ ಮೇಲ್ವಿಚಾರಕರು ಜನಜಾಗೃತಿ ವೇದಿಕೆ ಕಲಬುರ್ಗಿ ವಿಭಾಗ, ಶ್ರೀ ಬಸವರಾಜ್ ವಲಯದ ಮೇಲ್ವಿಚಾರಕರು ನಿಂಬರ್ಗ, ಶ್ರೀ ಸಂತೋಷ್ ಕೃಷಿ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆಳಂದ ತಾಲೂಕು,
ಯಳಸಂಗಿ ಗ್ರಾಮದ ಗಣ್ಯರು ಹಾಗೂ ನವಜೀವನ ಸಮಿತಿ ಸದಸ್ಯರು, VLEಗಳು, ಭೂಸನೂರ್ ಮತ್ತು ನಿಮರ್ಗ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು