ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲ ಗಾಣಗಾಪುರ ಕಾರ್ಯಕ್ಷೇತ್ರದ ಗುಣಮಣಿ ಮಹಾರಾಜರ ಮಠದ ಸಭಾಭವನದಲ್ಲಿ 154 ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀಸ್ಮರಣೆ ಹಾಗೂ ದುಶ್ಚಟಗಳ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀ ರಾಜಶೇಖರ ರಾಠೋಡ್ ( ಆರಕ್ಷಕ ಉಪ ನಿರೀಕ್ಷಕರು ದೇವಲ ಗಾಣಗಾಪುರ) ಇವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಗುವ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮೆಚ್ಚುಗೆ ವ್ಯಕ್ತಪಡಿಸಿ ಪೂಜ್ಯ ಧರ್ಮಾಧಿಕಾರಿಗಳು ಗಾಂಧೀಜಿ ಕಂಡ ಕನಸನ್ನು ನನಸು ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು…. ಸ್ವಸಹಾಯ ಸಂಘದ ಸದಸ್ಯರಲ್ಲಿ ಕಾನೂನಿನ ಮಾಹಿತಿಯ ಅತ್ಯಗತ್ಯ ಎಂದು ಮಾಹಿತಿ ನೀಡಿದರು. ಎಲ್ಲರೂ ದುಶ್ಚಟದ ವಿರುದ್ಧ ಜಾಗೃತರಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡುವ ಬಗ್ಗೆ ಮಾಹಿತಿಯನ್ನು ಸದಸ್ಯರಲ್ಲಿ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕರುಣಾಕರ್ ಭಟ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ದೇವರ ಗಣಗಪುರ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸತೀಶ್ ಸುವರ್ಣ (ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ) ಕಲಬುರಗಿ) ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆದ ಏಳು ವರ್ಷಗಳಿಂದ ಅಪಜಲಪುರ ತಾಲೂಕಿನಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕಟ್ಟಕಡೆಯ ವ್ಯಕ್ತಿಗೂ ಕೂಡ ತಲುಪುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇವೆ.. ಯೋಜನೆಯ ಹಲವಾರು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ ಅದನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎನ್ನುವಂಥ ಮಾಹಿತಿಯನ್ನು ನೀಡಿದರು. ಆರ್ಥಿಕ ವರ್ಷದಲ್ಲಿ csc ಕಾರ್ಯಕ್ರಮದ ಮುಖಾಂತರ ಸರಕಾರದ ಅನೇಕ ಕಾರ್ಯಕ್ರಮಗಳನ್ನು ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ತಿಳಿಸಿದರು. ಕ್ಷೇತ್ರ ಧರ್ಮಸ್ಥಳದಿಂದ ಕಳೆದ ವರ್ಷ ನವಂಬರ್ 13 2021 ರಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ದೇವಲ ಗಾಣಗಾಪುರಕ್ಕೆ ಆಗಮಿಸಿ ಶ್ರೀ ದತ್ತಾತ್ರೇಯಸ್ವಾಮಿಯ ದರ್ಶನ ಪಡೆದು ನಂತರ ಅಫಜಲಪುರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಕರೆಯುತ್ತಿದ್ದ ವಿಷಯದ ಎಂದರೆ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಅಗತ್ಯವಿದೆ.. ಈ ವಿಚಾರವಾಗಿ ಗ್ರಾಮ ಪಂಚಾಯಿತಿ ಆಗಿರಬಹುದು, ಸರ್ಕಾರದ ಅನೇಕ ಇಲಾಖೆಗಳ ಆಗಿರಬಹುದು, ಶ್ರಮಿಸುವುದರ ಜೊತೆಗೆ ಪ್ರತಿಯೊಬ್ಬ ಸದಸ್ಯರೂ ಕೂಡ ಗ್ರಾಮದಲ್ಲಿ ಸ್ವಚ್ಛತೆ ಇರಬೇಕೆನ್ನುವ ಮಾನಸಿಕ ಸಿದ್ಧತೆಯನ್ನು ಎಲ್ಲ ಸದಸ್ಯರುಗಳು ಮಾಡಬೇಕೆನ್ನುವ ವಿಚಾರಗಳನ್ನು ತಿಳಿಸಿದರು.. ಮುಂದಿನ ದಿನಗಳಲ್ಲಿ ಮಧ್ಯವರ್ಜನ ಶಿಬಿರ ಮಾಡುವ ಬಗ್ಗೆ ಈಗಾಗಲೇ ತಿಳಿಸಿದ್ದು ಪ್ರಸ್ತುತ ತಿಂಗಳು ಕಲಬುರಗಿ ತಾಲೂಕಿನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಅಪಜಲಪುರ ತಾಲೂಕಿನಲ್ಲಿ ಮಧ್ಯವರ್ಜನ ಶಿಬಿರ ಕಾರ್ಯಕ್ರಮ ಮಾಡುವ ಬಗ್ಗೆ ಮಾಹಿತಿಯನ್ನು ನೀಡಿದರು… ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಶ್ರೀಮತಿ ಡಾ. ಆರತಿ ಬಡಿಗೇರ್ ವೈದ್ಯರು ಆಯುರ್ವೇದ ಆಸ್ಪತ್ರೆ ದೇವಲ ಗಾಣಗಾಪುರ ಪೂಜ್ಯರ ಕಾರ್ಯಕ್ರಮವನ್ನು ಶ್ಲಾಘಿಸಿ ದುಶ್ಚಟ ಮುಕ್ತ ಸಮಾಜಕ್ಕೆ ಪ್ರತಿಯೊಬ್ಬ ಸದಸ್ಯರು ಜಾಗ್ರತೆಯಿಂದ ನಡೆಯಬೇಕೆಂದು ಮಾಹಿತಿ ನೀಡಿದರು.. ತಂಬಾಕು ಸೇವನೆ, ಸಿಗರೇಟು ಸೇವನೆ,ಗುಟ್ಕಾ ಸೇವನೆ ಹಾಗೂ ಮದ್ಯಪಾನವನ್ನು ಸೇವನೆ ಮಾಡುವುದರಿಂದ ಅದರಿಂದಾಗುವ ದುಷ್ಪರಿಣಾಮಗಳು ಮತ್ತು ದೈಹಿಕವಾಗಿ,ಮಾನಸಿಕವಾಗಿ ಮತ್ತು ಪರಿಸರದ ಮೇಲೆ ಸಮುದಾಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಕಲಮ ಭಟ್ (ಪ್ರಧಾನ ಅರ್ಚಕರು ಶ್ರೀ ದತ್ತಾತ್ರೇಯ ದೇವಸ್ಥಾನ ದೇವಲ ಗಾಣಗಾಪುರ) ಶ್ರೀ ವಿಠ್ಠಲ್ ಪಟೇಲ್ ಹಿರಿಯ ನಾಗರಿಕರು (ಅಧ್ಯಕ್ಷರು ಶ್ರೀ ಗಂಗಾಪರಮೇಶ್ವರಿ ಶಾಲೆ ದೇವಲ ಗಾಣಗಾಪುರ) ಶ್ರೀ ಬಾಬುಗೌಡ ಸಿ ಪೊಲೀಸ್ ಪಾಟೀಲ್( ಹಿರಿಯ ನಾಗರಿಕರು ತೆಲ್ಲೂರು) ಶ್ರೀಮತಿ ಸಾವಿತ್ರಿ ಹೊಸಮನಿ (ಒಕ್ಕೂಟದ ಅಧ್ಯಕ್ಷರು ದೇವಲ ಗಾಣಗಾಪುರ) ಉಪಸ್ಥಿತರಿದ್ದರು ಈ ಕಾರ್ಯಕ್ರಮದಲ್ಲಿ 2 ಜನ ನಿರ್ಗತಿಕರಿಗೆ ಮಾಶಾಸನ ವಿತರಣೆಯನ್ನು ಮಾಡಲಾಯಿತು 2251ಸ್ವಸಹಾಯ ಸಂಘದ ದಾಖಲಾತಿ ಹಸ್ತಾಂತರ ಕಾರ್ಯಕ್ರಮವನ್ನು ಕೂಡ ನೆರವೇರಿಸಲಾಯಿತು ಪ್ರಸ್ತುತ ವರ್ಷದಲ್ಲಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಿಡ್ಬಿ ಪ್ರಯಾಸ್ ಅಡಿಯಲ್ಲಿ ಸಂಘದ ಸದಸ್ಯರಿಗೆ ಪ್ರಗತಿನಿಧಿ ನೀಡುತ್ತಿದ್ದೂ ಚೆಕ್ ವಿತರಣೆ ಕಾರ್ಯಕ್ರಮವನ್ನು ಮಾಡಲಾಯಿತು . ತಾಲೂಕಿನ ಯೋಜನಾಧಿಕಾರಿಗಳಾದ ಶಿವರಾಜ್ ಆಚಾರ್ಯ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಅನಿಲ್ ದವಾನೇ ಮೇಲ್ವಿಚಾರಕರು ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದಲ್ಲಿ ಮಂಜುನಾಥ ಮೇಲ್ವಿಚಾರಕರು ಧನ್ಯವಾದ ನೆರೆವೇರಿಸಿದರು.. ಸುಮಾರು 300ಕ್ಕೂ ಅಧಿಕ ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
