ಕಮಲಾಪುರ ಯೋಜನಾಕಛೇರಿ ವ್ಯಾಪ್ತಿಯ ಅವರಾದ ವಲಯದ ಭವಾನಿ ನಗರದ ಬಬಲಾದಿ ಮಠದ ಸಭಾ ಭವನದಲ್ಲಿ ರಾಷ್ಟ್ರಪಿತಾಮಹ ಮಹಾತ್ಮಾ ಗಾಂಧೀಜಿ ಅವರ 154ನೇ ಜನ್ಮದಿನದ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಥಾ ಕಾರ್ಯಕ್ರಮ ಮತ್ತು ಹಿರಿಯ ನಾಗರಿಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ದುಶ್ಚಟಗಳ ವಿರುದ್ಧ ಜಾಥಾಕ್ಕೆ ಕಲಬುರಗಿ ಜಿಲ್ಲಾ ನಿರ್ದೇಶಕರು ಶ್ರೀ ಸತೀಶ ಸುವರ್ಣ ಸರ್ ಪಾರಿವಾಳ ಹಾರಿಬಿಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಶ್ರೀ ಬಸವರಾಜ ಪಾಟೀಲ ಸೇಡಂ (ಮಾಜಿ ಲೋಕಸಭಾ ಸದಸ್ಯರು) ಅವರು ನೆರವೇರಿಸಿ ಯೋಜನೆಯ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಿದವರನ್ನು ಸ್ವಸಹಾಯ ತಂಡದ ಸದಸ್ಯರ 90% ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು ಸಂಪನ್ಮೂಲ ವ್ಯಕ್ತಿ ಶ್ರೀ ಮತಿ ಮಾಲತಿ ರೆಶ್ಮಿ ಅವರು ದುಶ್ಚಟಗಳ ಕುರಿತು ಜಾಗೃತಿ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಸುನೀಲ್ ಮಚೆಟ್ಟಿ ಬಸವರಾಜ ಮುನ್ನಳಿ ಶ್ರೀ ಮತಿ ಪುತಲಿ ಬೇಗಮ್ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀ ರಮೇಶ ಬಿದ್ದನೂರು ಯೋಜನಾಧಿಕಾರಿ ಕಲ್ಲನಗೌಡ ಎಸ್ ಹಿರಿಯ ನಾಗರಿಕರು ಶಾಲೆ ಮಕ್ಕಳು ತಾಲೂಕಿನ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಸೇವಾಪ್ರತಿನಿಧಿಗಳು ಸದಸ್ಯರಿದ್ದರು.
