ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ವಿಜಯನಗರ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕಂಪ್ಲಿ, ಪುರಸಭೆ ಕಂಪ್ಲಿ, ಆರೋಗ್ಯ ಇಲಾಖೆ ಕಂಪ್ಲಿ, ಹಾಲು ಉತ್ಪಾದಕರ ಸಹಕಾರಿ ಸಂಘ ಕಂಪ್ಲಿ, ಜೆ.ಸಿ.ಐ ಸೋನಾ ಕಂಪ್ಲಿ, ಪತ್ರಿಕಾ ಮಾಧ್ಯಮಗಳು ಕಂಪ್ಲಿ, ರೈಸ್ ಮಿಲ್ ಸಹಕಾರಿ ಸಂಘ ಕಂಪ್ಲಿ, ಮೆಡಿಕಲ್ ಅಸೋಸಿಯೇಷನ್ ಕಂಪ್ಲಿ, ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಂಪ್ಲಿ, ಸಮಸ್ತ ಸಂಘ ಸಂಸ್ಥೆಗಳು ಹಾಗೂ ಊರಿನ ಗಣ್ಯರು, ದಾನಿಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಪರಮಪೂಜ್ಯ ಡಾll. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾll. ಹೇಮಾವತಿ .ವಿ ಹೆಗ್ಗಡೆಯವರ ಮಾರ್ಗದರ್ಶನಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ, ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಸಮುದಾಯ ಭವನ ಶಿಬಿರದಿನ್ನಿ ಮಾರುತಿನಗರ ಕಂಪ್ಲಿಯಲ್ಲಿ 1606ನೇ ಮದ್ಯವರ್ಜನ ಶಿಬಿರ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾl. ಶ್ರೀ ವೆಂಕಟೇಶ್ ಸಿ. ಭರಮಕ್ಕನವರ್ ಇವರು ವಹಿಸಿದ್ದರು. ಉದ್ಘಾಟನೆಯನ್ನು ಶ್ರೀಮತಿ ಶಾಂತಲಾ ವಿದ್ಯಾಧರ ಅಧ್ಯಕ್ಷರು ಪುರಸಭೆ ಕಂಪ್ಲಿ ಇವರು ನೆರವೇರಿಸಿ ಉದ್ಘಾಟಕರ ಮಾತನ್ನಾಡಿದರು. ಶ್ರೀ ನಂದಕುಮಾರ್ ಪಿ.ಪಿ ಶಿಬಿರಾಧಿಕಾರಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತನ್ನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಚಿದಾನಂದ.ಕೆ ಮಾನ್ಯ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಜಯನಗರ ಜಿಲ್ಲೆ, ಶ್ರೀ ಶಿವಲಿಂಗಪ್ಪ ಮುಖ್ಯ ಅಧಿಕಾರಿಗಳು ಪುರಸಭೆ ಕಂಪ್ಲಿ, ಶ್ರೀ ಸತ್ಯನಾರಾಯಣ ಅಧ್ಯಕ್ಷರು ವರ್ತಕರ ಸಂಘ ಕಂಪ್ಲಿ, ಶ್ರೀ ಚನ್ನಬಸಯ್ಯಸ್ವಾಮಿ ಗಣ್ಯರು ಕಂಪ್ಲಿ, ಶ್ರೀ ವಾಲ್ಮೀಕಿ ಈರಣ್ಣ ಗಣ್ಯರು ಕಂಪ್ಲಿ, ಶ್ರೀ ಶಂಶುದ್ದೀನ್ ಗಣ್ಯರು ಕಂಪ್ಲಿ ಇವರು ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೆಸಿಲ್ಲಾ ಡಿ. ಸೋಜಾ ಆರೋಗ್ಯ ಸಹಾಯಕಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀ ಹಾಲಪ್ಪ ಎಂ.ಎ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಂಪ್ಲಿ ತಾಲೂಕು ಇವರು ಸ್ವಾಗತಿಸಿ, ಶ್ರೀ ಸಂಜೀವಕುಮಾರ್ ಕೃಷಿ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಂಪ್ಲಿ ತಾಲೂಕು ಇವರು ನಿರೂಪಿಸಿ, ಶ್ರೀಮತಿ ಮಂಜುಳಾ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ರಾಮಸಾಗರ ವಲಯ ಇವರು ವಂದಿಸಿದರು.
