ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ.

Janajagurthi Vedike News

ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ ಉಡುಪಿಯಲ್ಲಿ ನಡೆಯಿತು. ಸಭೆಯನ್ನು ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ವಿ. ರಾಮಸ್ವಾಮಿ ಯವರು ಉದ್ಘಾಟನೆ ಮಾಡಿದರು. ಸಭೆಯಲ್ಲಿ ಜನಜಾಗೃತಿ ಪ್ರಾದೇಶಿಕ ಕಚೇರಿಯಿಂದ ನಡೆಸಲ್ಪಡುವ ವಿವಿಧ ಕಾರ್ಯಕ್ರಮಗಳಾದ ನವಜೀವನ ಸಮಿತಿಗಳು ಮತ್ತು ಅವುಗಳ ಬಲವರ್ಧನೆ, ಮದ್ಯವರ್ಜನ ಶಿಬಿರಗಳ ಆಯೋಜನೆ ಕುರಿತು ಚರ್ಚೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರು, ಮಾರ್ಗದರ್ಶಕರು, ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ಹೆಗ್ಡೆ ಅವರು ವಹಿಸಿದ್ದರು. ನಿಕಟಪೂರ್ವ ರಾಜ್ಯಾಧ್ಯಕ್ಷರುಗಳಾದ ಶ್ರೀ ಸತೀಶ್ ಹೊನ್ನವಳ್ಳಿ, ಶ್ರೀ ದೇವದಾಸ್ ಹೆಬ್ಬಾರ್, ಉಡುಪಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಸಂತ್ ಸಾಲಿಯಾನ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ.ಪಾಯಸ್, 7 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳು, ನಿಕಟಪೂರ್ವ ಜಿಲ್ಲಾಧ್ಯಕ್ಷರುಗಳು, ಸ್ಥಳೀಯ ಜಿಲ್ಲಾ ತಾಲೂಕು ಅಧ್ಯಕ್ಷರುಗಳು, ತಾಲೂಕು ಕಾರ್ಯದರ್ಶಿಗಳು, ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ್, ಮೋಹನ್.ಕೆ, ಜೈವಂತ್ ಪಟಗಾರ್, ಪುರಂದರ ಪೂಜಾರಿ ಉಪಸ್ಥಿತರಿದ್ದರು.