ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಉಡುಪಿ ಪ್ರಾದೇಶಿಕ ವಿಭಾಗದ ದಕ್ಷಿಣ ಕನ್ನಡ 2 ಜಿಲ್ಲೆಯ ಭಾರತ್ ಮಾತ ಸಮುದಾಯ ಭವನ ಕಲ್ಲೇಗದಲ್ಲಿ ನಡೆಯುತ್ತಿರುವ, 1775ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಗೌರವಾನ್ವಿತರು ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯಸ್ ರವರು ನೆರವೇರಿಸಿ ಕೊಟ್ಟರು. ಈ ಸಂದರ್ಭ ವೇದಿಕೆಯಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಪದ್ಮನಾಭ ಶೆಟ್ಟಿ ಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ 2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಪ್ರವೀಣ್ ಕುಮಾರ್ ರವರು, ಡಾ. ನಾರಾಯಣ ಭಟ್, ಪುತ್ತೂರು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಶ್ರೀಯುತ ಶಿವಪ್ರಕಾಶ್ ಅಡಪಂಗಾಯ, ಸುಳ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀಯುತ ಶಶಿಧರ್, ಯೋಜನಾಧಿಕಾರಿಗಳು ಪುತ್ತೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಯುತ ಗಣೇಶ್ ಆಚಾರ್ಯ ಜನಜಾಗೃತಿ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಉಮೇಶ್ ಮತ್ತು ಶ್ರೀಮತಿ ಶ್ರುತಿ, ಇತರ ತಾಲೂಕಿನ ಮೇಲ್ವಿಚಾರಕರು, ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಗಳು, ಎಲ್ಲಾ ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು,
