ಉಡುಪಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಕೊಡಗು ಜಿಲ್ಲೆಯ. ಜಿಲ್ಲಾ ವೇದಿಕೆ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಸತೀಶ್ ಹೊನ್ನಾಳಿ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದಶಲಕ್ಷ ಗಿಡ ನಾಟಿ ಕಾರ್ಯಕ್ರಮದಂಗವಾಗಿ ಎಲ್ಲ ಪದಾಧಿಕಾರಿಗಳಿಗೆ ಹಣ್ಣಿನ ಗಿಡಗಳನ್ನು ನೀಡುವುದರ ಮೂಲಕ ಸ್ವಾಗತ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಲೀಲಾವತಿಯವರು ಜನಜಾಗೃತಿ ಕ್ರಿಯಾ ಯೋಜನೆಯ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು. ಮದ್ಯವರ್ಜನ ಶಿಬಿರ. ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ. ಮತ್ತು ತರಬೇತಿ .ಮಾದಕ ವಸ್ತು ವಿರೋಧಿ ದಿನಾಚರಣೆ .ಮತ್ತುನವ ಜೀವನ ಸಮಿತಿ ಅನುಷ್ಠಾನ. ಸಾಮಾಜಿಕ ಅರಣ್ಯಕರಣ ಗಿಡ ನಾಟಿ .ಮತ್ತು ಜನಜಾಗೃತಿ ದಾಖಲೀಕರಣ ಕುರಿತು ಮಾಹಿತಿ ನೀಡಲಾಯಿತು. ಈ ಕುರಿತು ಮೂರು ತಿಂಗಳಿಗೊಮ್ಮೆ ವೇದಿಕೆಯ ಸಭೆಯನ್ನು ನಡೆಸಿ ಜನಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆ ಮತ್ತು ತಾಲೂಕಿನಲ್ಲಿ ಅನುಷ್ಠಾನ ಮಾಡುವ ಕುರಿತು ನಿರ್ಣಯಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು ತಾಲೂಕಿನ ಪದಾಧಿಕಾರಿಗಳು ಮತ್ತು 5 ತಾಲೂಕಿನ ಕಚೇರಿ ಯೋಜನಾಧಿಕಾರಿಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು ತ್ತಾರೆ
