ಉಡುಪಿ ತಾಲೂಕಿನ ಜನಜಾಗೃತಿ ವೇದಿಕೆಯ ಕಾರ್ಯಕಾರಿ ಸಮಿತಿ ಸಭೆ

Janajagurthi Vedike News

ಉಡುಪಿ ತಾಲೂಕಿನ ಜನಜಾಗೃತಿ ವೇದಿಕೆಯ ಕಾರ್ಯಕಾರಿ ಸಮಿತಿ ಸಭೆಯನ್ನು ಆಯೋಜಿಸಿದ್ದು, ಈ ಸಭೆಯಲ್ಲಿ ಮಾನ್ಯ ಪ್ರಾದೇಶಿಕ ನಿರ್ದೇಶಕರು ಜಿಲ್ಲಾ ನಿರ್ದೇಶಕರು, ರಾಜ್ಯ ನಿಕಟ ಪೂರ್ವ ಜನ ಜಾಗ್ರತಿ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರು ಉಪಾಧ್ಯಕ್ಷರು,ನಿಕಟ ಪೂರ್ವ ಜಿಲ್ಲಾ ಅದ್ಯಕ್ಷರು ಜಿಲ್ಲಾ ಜನಜಾಗ್ರತಿ ಸದಸ್ಯರು ಉಡುಪಿ, ಕಾಪು, ಬ್ರಹ್ಮವರ ಕ್ಷೇತ್ರ ಯೋಜನಾಧಿಕಾರಿಯವರು ಹಾಗೂ ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.ತಾಲೂಕು ಜನಜಾಗೃತಿ ವೇದಿಕೆ ಹೆಬ್ರಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನಂಜಪ್ಪಶೆಟ್ಟಿ ಸಭಾಭವನದಲ್ಲಿ ನೆರವೇರಿಸಲಾಯಿತು. ನೂತನವಾಗಿ ಆಯ್ಕೆಯಾದಂತಹ ತಾಲೂಕು ಜನಜಾಗತಿ ವೇದಿಕೆ ಅಧ್ಯಕ್ಷರಾಗಿ ಶ್ರೀಯುತ ನೀರೇ ಕೃಷ್ಣ ಶೆಟ್ಟಿ ಅವರಿಗೆ ನಿಕಟ ಪೂರ್ವ ಕಾರ್ಕಳ ತಾಲೂಕು ಜನಜಾಗೃತಿ ಅಧ್ಯಕ್ಷರಾದ ಶ್ರೀಯುತ ಸುಭಾಷ್ ಚಂದ್ರ ಚೌಟ ಸರ್ ಅವರು ಜವಾಬ್ದಾರಿ ಹಸ್ತಾಂತರ ಮಾಡಿದರು.ಕಾರ್ಯಕ್ರಮದಲ್ಲಿ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆಗೌಡ ಸರ್ ಅವರು ಮಾತನಾಡಿ ಯೋಜನೆಯ ನಡೆದು ಬಂದ ಹಾದಿ, ಕ್ಷೇತ್ರದ ಹಿನ್ನೆಲೆ, ಯೋಜನೆಯ ಕಾರ್ಯಕ್ರಮಗಳ ಬಗ್ಗೆ, ಜನಜಾಗೃತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ನೂತನವಾಗಿ ಆಯ್ಕೆಯಾದ ನೀರೇ ಕೃಷ್ಣಶೆಟ್ಟಿ ಅವರು ಮಾತನಾಡುತ್ತಾ, ಅಕ್ಟೋಬರ್ 8ರ ಕಾರ್ಯಕ್ರಮದ ತಯಾರಿಯ ಬಗ್ಗೆ, ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನಗಳ ಬಗ್ಗೆ, ಎಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿ, ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಸರ್, ಎಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಕೇಂದ್ರ ಸಮಿತಿಯ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷರು, ಯೋಜನಾಧಿಕಾರಿಯವರು, ಮೇಲ್ವಿಚಾರಕರು ಉಪಸ್ಥಿತರಿದ್ದರು.