ಆಳಂದ ತಾಲೂಕಿನ ಶ್ರೀ ಲೋಕಮಾನ್ಯ ಜಯಪ್ರಕಾಶ ಪ್ರೌಢ ಶಾಲೆಯಲ್ಲಿ ಈ ದಿನ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚಾರಣೆಯ ಅಂಗವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike News

ಆಳಂದ ತಾಲೂಕಿನ ಶ್ರೀ ಲೋಕಮಾನ್ಯ ಜಯಪ್ರಕಾಶ ಪ್ರೌಢ ಶಾಲೆಯಲ್ಲಿ ಈ ದಿನ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚಾರಣೆಯ ಅಂಗವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಮಾನ್ಯ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿ ಸರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಲ್. ಪಿ . ಬೀದಿ ಸರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಪ್ಪಸಾಬ ತೀರ್ಥೆ ಸರ್ ರವರು ದುಶ್ಚಟದಿಂದಾಗುವ ದುಸ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವರದಿಗಾರರು D.M. ಪಾಟೀಲ್, ಕೃಷಿ ಮೇಲ್ವಿಚಾರಕರು , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.