ಆರೋಗ್ಯವಂತ ಜೀವನಕ್ಕಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ – ಶ್ರೀ ಶಿವರಾಯ ಪ್ರಭು ನಿರ್ದೇಶಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಉಡುಪಿ ತಾಲೂಕಿನ ಅಂಬಲ್ಪಾಡಿ ವಲಯದ ವತಿಯಿಂದ ಮಲ್ಪೆ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ಸದಸ್ಯರು ಜಿಲ್ಲಾ ಜನಜಾಗೃತಿ ವೇದಿಕೆ ವಹಿಸಿದರು. ಶ್ರೀ ಗಣೇಶ್ ಆಚಾರ್ಯ ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿಯನ್ನು ನೀಡಿ ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಸತ್ಯಾನಂದ ನಾಯಕ್ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ, ಶ್ರೀಮತಿ ಸಂಧ್ಯಾ H M, ಶ್ರೀ ರಾಮ್ M ಯೋಜನಾಧಿಕಾರಿ, ಶ್ರೀಮತಿ ಇಂದಿರಾ ವಾಸು ಅಧ್ಯಕ್ಷರು kalmady ಸಮೃದ್ಧಿ ಒಕ್ಕೂಟ, ಶ್ರೀ ಜಗದೀಶ್ ಸಾಲ್ಯಾನ್ ಅಧ್ಯಕ್ಷರು SCDMC ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ , ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಶಾಲಾ ಶಿಕ್ಷಕರು ಮೇಲ್ವಿಚಾರಕರು ಸೇವಾಪ್ರತಿನಿಧಿಯವರು ಉಪಸ್ಥಿತರಿದ್ದರು
