ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ಚನ್ನರಾಯಪಟ್ಟಣ ವೇದಿಕೆಯ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಜನಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ಚನ್ನರಾಯಪಟ್ಟಣ ವೇದಿಕೆಯ ವತಿಯಿಂದ ಅಕ್ಟೋಬರ್ 2 ಗಾಂಧಿ ಜಯಂತಿಯ ಪ್ರಯುಕ್ತ ಜನಜಾಗೃತಿ ಜಾಥಾ ಮತ್ತು ವ್ಯಸನ ಮುಕ್ತ ಸಾಧಕರ ಸಮಾವೇಶ ದಿನಾಂಕ 7/10/2023 ಜಯಮ್ಮ ಶಿವಲಿಂಗೇಗೌಡ ಕಲ್ಯಾಣ ಮಂಟಪ ಕೆಆರ್ ಪೇಟೆ ಯಲ್ಲಿ ಜರಗಿತು. ಈ ಕಾರ್ಯಕ್ರಮದ ಜಾಥಾದ ಚಾಲನೆ ಶ್ರೀ ಮಲ್ಲಿಕಾರ್ಜುನ ಆರ್ ಟಿ ಓ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಕೆ ಆರ್ ಪೇಟೆ ತಾಲೂಕಿನ ಮಾನ್ಯ ಶಾಸಕರಾದ ಶ್ರೀ ಎಚ್ ಟಿ ಮಂಜು ರವರ ನೆರವೇರಿಸಿದರು ನವಜೀವನ ಸಮಿತಿ ಸದಸ್ಯರಾದ ವೈರ್ ಮಡಿ ಮತ್ತು ಶಿವರಾಜ್ ಇವರು ಅನಿಸಿಕೆ ವ್ಯಕ್ತಪಡಿಸಿದರು. ಕೆ ಆರ್ ಪೇಟೆ ತಾಲೂಕಿನ ಮಾಜಿ ಸಚಿವರಾದ ನಾರಾಯಣಗೌಡ ಇವರು ಗಾಂಧಿಜಿಯ ಫೋಟೋಗೆ ಪುಷ್ಪ ನಮನವನ್ನು ಮಾಡಿ ಮಧ್ಯವರ್ಜನ ಶಿಬಿರಗಳ ಬಗ್ಗೆ ಉತ್ತಮ ಶ್ಲಾಘನೀಯ ವ್ಯಕ್ತಪಡಿಸಿದರು. ಗಾಂಧಿಜಿಯವರ ವಿಚಾರಧಾರೆ ಬಗ್ಗೆ ಪಾಂಡವಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀಮತಿ ಸರಸ್ವತಿ ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗ್ರತಿ ವೇದಿಕೆ ಬೆಳೆದು ಬಂದ ದಾರಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಪೂಜ್ಯರ ಕಲ್ಪನೆ ಹಾಗೂ ಮಹಿಳೆಯರ ಸಬಲೀಕರಣದ ಬಗ್ಗೆ ಮಾರ್ಗದರ್ಶನ ನೀಡಿದರು.ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನರಾಯಪಟ್ಟಣದ ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಶ್ರೀ ಜಯರಾಮ ತೋಟಿ ರವರು ವಹಿಸಿಕೊಂಡಿದ್ದರು. ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರು, ಜನಜಾಗೃತಿ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರು, ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಜಿಲ್ಲೆಯ ಎಲ್ಲಾ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.